ರಸ್ತೆ ಗುಂಡಿಗೆ ಬಿದ್ದು ಗಾಯಗೊಂಡ ಮಹಿಳೆ ಈಗ ಆರ್ಥಿಕ ಪ್ರಪಾತಕ್ಕೆ; 15 ದಿನದಲ್ಲಿ ಬಂತು 7.5 ಲಕ್ಷ ಬಿಲ್!

pothole
Published on

ಬೆಂಗಳೂರು: ಕಳೆದ ತಿಂಗಳು ಇವರು ರಸ್ತೆ ಗುಂಡಿಯಿಂದ ಅಪಘಾತಕ್ಕೆ ಒಳಗಾಗಿದ್ದರು. ಹದಿನೈದು ಕಳೆಯುವುದೇ 7.5 ಲಕ್ಷ ರುಪಾಯಿಯ ಬಿಲ್​ ಇವರ ಮಡಿಲಿಗೆ ಬಂದು ಬಿದ್ದಿದೆ!

ಅ.16 ರಂದು ಪೀಣ್ಯದಲ್ಲಿ ಸುಗುಣಾ ಎನ್ನುವವರು ಮನೆಗೆ ಹಿಂತಿರುಗುವಾಗ ರಸ್ತೆ ಗುಂಡಿಯಿಂದಾಗಿ ನಿಯಂತ್ರಣ ತಪ್ಪಿ ಬಿದ್ದಿದ್ದರು. ಮಳೆ ನೀರು ತುಂಬಿದ್ದರಿಂದ ಗುಂಡಿ ಇದ್ದದ್ದೂ ಗೊತ್ತಾಗಿರಲಿಲ್ಲ. ಗಂಭೀರವಾಗಿ ಗಾಯಗೊಂಡ ಸುಗುಣಾ, ಆಸ್ಪತ್ರಗೆ ದಾಖಲಾಗಿದ್ದರು.

ಮಹಿಳೆಯ ಪತಿ ಮಹೇಶ್​ ಮಾಡಿಸಿದ್ದ ವಿಮೆಯಿಂದ 5.6 ಲಕ್ಷ ರೂ. ಸಿಕ್ಕಿದ್ದರೂ 2 ಲಕ್ಷ ರೂ. ವನ್ನು ಕುಟುಂಬ ತಮ್ಮ ಜೇಬಿನಿಂದ ಭರಿಸಿದೆ. ಒಟ್ಟು ಬಿಲ್ 7.5 ಲಕ್ಷ ರೂ. ತಲುಪಿದ್ದು ದಿನಕ್ಕೆ ಸರಾಸರಿ 50 ಸಾವಿರ ರೂ. ಖರ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net