ತಾಯಿಯ ಶವವನ್ನು ಕಂಬಳಿಯಲ್ಲಿ ಸುತ್ತಿ, ಫೂಟ್​ಪಾತ್​ ಮೇಲೆ ಎಸೆದ ಪುತ್ರ; ಕಾರಣ ಕೊವಿಡ್​ -19 ಅಲ್ಲ !

Dead Body
Published on

ಹೈದರಾಬಾದ್​: ಈ ವ್ಯಕ್ತಿ ತನ್ನ ಹೆತ್ತ ತಾಯಿಯ ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ, ಫೂಟ್​ಪಾತ್​ ಮೇಲೆ ಎಸೆದು ಹೋದ ಅಮಾನವೀಯ ಘಟನೆ ಹೈದರಾಬಾದ್​​ನ ಬಂಜಾರಾ ಹಿಲ್ಸ್​​ನಲ್ಲಿ ನಡೆದಿದೆ.

ಕಂಬಳಿಯಲ್ಲಿ ಸುತ್ತಿಕೊಂಡಿದ್ದ ಮೃತದೇಹ ನೋಡಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಅವರು ಬಂದು ಪರಿಶೀಲನೆ ನಡೆಸಿದ್ದಾರೆ.

ಈ 70 ವರ್ಷದ ವೃದ್ಧೆ ಭಿಕ್ಷೆ ಬೇಡಿ, ಹೊಟ್ಟೆತುಂಬಿಸಿಕೊಳ್ಳುತ್ತಿದ್ದರು. ಆದರೆ ನಂತರ ಇವರಿಗೆ ಮಗ ಇರುವುದು ತಿಳಿದುಬಂತು. ಇಲ್ಲೇ ಸಮೀಪದ ಅಪಾರ್ಟ್​ಮೆಂಟ್​ವೊಂದರಲ್ಲಿ ಆತ ವಾಚ್​ಮನ್​ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವೃದ್ಧೆ ಕಳೆದ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆಯೂ ಸಿಗಲಿಲ್ಲ. ಅವರ ಮೃತದೇಹವನ್ನು ಪುತ್ರನೇ ಕಂಬಳಿಯಲ್ಲಿ ಸುತ್ತಿ ಎಸೆದಿದ್ದಾನೆ. ಕಾರಣ ಕೇಳಿದ್ದಕ್ಕೆ, ಅಮ್ಮನ ಅಂತ್ಯಕ್ರಿಯೆ ಮಾಡಲು ನನ್ನ ಬಳಿ ಹಣವಿಲ್ಲ. ಹಾಗಾಗಿಯೇ ಹೀಗೆ ಎಸೆಯಬೇಕಾಯ್ತು. ಮಹಿಳೆ ಜ್ವರದಿಂದ ಸತ್ತಿದ್ದಕ್ಕೆ ಮನೆಯ ಓನರ್​ ಕೂಡ ಕಿರಿಕಿರಿ ಮಾಡುತ್ತಿದ್ದ. ಕೊವಿಡ್​-19 ಇರಬಹುದು ಎಂಬ ಕಾರಣಕ್ಕೆ ತೊಂದರೆ ಕೊಡುತ್ತಿದ್ದ ಎಂದು ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net