ಚಳಿಗಾಲ ಅಧಿವೇಶನ ಇಂದು ಆರಂಭ; ಹಣದುಬ್ಬರ, ಇಡಬ್ಲ್ಯುಎಸ್ ಚರ್ಚೆಗೆ ಪ್ರತಿಪಕ್ಷಗಳ ಒತ್ತಾಯ

56484
Published on

ನವದೆಹಲಿ: ಡಿಸೆಂಬರ್ 7ರಂದು ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ದುರ್ಬಲ ವರ್ಗಕ್ಕೆ (ಇಡಬ್ಲ್ಯುಎಸ್)ಮೀಸಲು ಸೇರಿ ಹಲವು ವಿಷಯಗಳ ಕುರಿತು ರ್ಚಚಿಸಲು ಅನುವು ಮಾಡಿಕೊಡಬೇಕೆಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

ಅಧಿವೇಶನದಲ್ಲಿ ಶಾಸಕಾಂಗ ಕಾರ್ಯಸೂಚಿ ಹಾಗೂ ಇತರೆ ವಿಷಯಗಳ ಕುರಿತು ರ್ಚಚಿಸಲು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಎಲ್ಲ ಪ್ರಮುಖ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ಸರ್ಕಾರವನ್ನು ಲೋಕಸಭೆಯಲ್ಲಿ ಬಿಜೆಪಿಯ ಉಪ ನಾಯಕರಾಗಿರುವ ರಾಜನಾಥ ಸಿಂಗ್ ಮತ್ತು ರಾಜ್ಯಸಭೆಯಲ್ಲಿನ ಬಿಜೆಪಿ ನಾಯಕ ಪಿಯೂಷ್ ಗೋಯೆಲ್ ಪ್ರತಿನಿಧಿಸಿದ್ದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೂಡ ಭಾಗವಹಿಸಿದ್ದರು. ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳಿಗೆ ಅವಕಾಶ ನೀಡಬೇಕೆಂದು ಟಿಎಂಸಿ ನಾಯಕ ಡೆರೆಕ್ ಒ’ಬ್ರೇನ್ ಕೂಡ ಸರ್ಕಾರವನ್ನು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ. ಚಳಿಗಾಲದ ಅಧಿವೇಶನವು ಡಿಸೆಂಬರ್ 29ರವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net