ಅಭಿನಂದನೆಗಳು ಅಭಿನಂದನ್​: ಬಾಲಾಕೋಟ್​ ಏರ್​​ ಸ್ಟ್ರೈಕ್ ಹೀರೋ ಇನ್ನು ಗ್ರೂಪ್​ ಕ್ಯಾಪ್ಟನ್​..

Abhinandan
Published on

ದೆಹಲಿ: ಬಾಲಾಕೋಟ್​​ನ ಏರ್ ಸ್ಟ್ರೈಕ್​ ಹೀರೋ ವಿಂಗ್ ಕಮಾಂಡರ್​ ಅಭಿನಂದನ್ ವರ್ಧಮಾನ್​​ಗೆ ದೀಪಾವಳಿಯ ಶುಭಾಶಯಗಳ ಜೊತೆಗೇ ಅಭಿನಂದನೆಗಳನ್ನು ಹೇಳುವ ಸಂದರ್ಭ ಒದಗಿ ಬಂದಿದೆ. ಏಕೆಂದರೆ ಅವರಿಗೆ ಪದೋನ್ನತಿ ಲಭಿಸಿದೆ.

ವಿಂಗ್ ಕಮಾಂಡರ್ ಅಭಿನಂದನ್ ಎಂದಾಕ್ಷಣ ಅವರು ಅಂದು ಪಾಕ್​ ನೆಲದೊಳಕ್ಕೆ ಹೊಕ್ಕು ಎದೆಗುಂದದೆ ದಿಟ್ಟ ಉತ್ತರ ಕೊಟ್ಟು ಜೀವಂತ ಮರಳಿದ ಆ ರೋಚಕ ಕ್ಷಣಗಳೇ ಕಣ್ಮುಂದೆ ಬರುತ್ತವೆ. 2019ರ ಫೆ. 27ರಂದು ನಡೆದಿದ್ದ ಪಾಕ್ ದಾಳಿಯಲ್ಲಿ ಶತ್ರುಗಳ ಎಫ್​-16 ಯುದ್ಧವಿಮಾನವನ್ನು ಅಭಿನಂದನ್​ ತಮ್ಮ ಮಿಗ್-21 ಮೂಲಕವೇ ಹೊಡೆದರುಳಿಸಿದ್ದರು.

ನಂತರ ಗಾಯಗೊಂಡು ಶತ್ರುಗಳ ವಶವಾದರೂ ದಿಟ್ಟತನದಿಂದಲೇ ಪರಿಸ್ಥಿತಿಯನ್ನು ಎದುರಿಸಿ ಭಾರತಕ್ಕೆ ಮರಳಿ ದೇಶದ ಜನರಿಂದ ಅಪಾರ ಮೆಚ್ಚುಗೆ ಗಳಿಸಿದ್ದರು. ಇವರಿಗೆ ನಂತರ ಶೌರ್ಯಪ್ರಶಸ್ತಿಯನ್ನೂ ನೀಡಲಾಯಿತು. ಇದೀಗ ಭಾರತೀಯ ವಾಯುಸೇನೆ ಗ್ರೂಪ್​ ಕ್ಯಾಪ್ಟನ್​ ಆಗಿ ಪದೋನ್ನತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net