

Congress: ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಮುನ್ನ, ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ-ಪಾಕಿಸ್ತಾನ ಕದನ ವಿರಾಮದ ಹಕ್ಕುಗಳು ಮತ್ತು ಲಕ್ಷಾಂತರ ಭಾರತೀಯ H-1B ವೀಸಾ ಹೊಂದಿರುವವರ ಕಳವಳಗಳನ್ನು ಮೋದಿ ಪರಿಹರಿಸುತ್ತಾರೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ಉಸ್ತುವಾರಿ ಜೈರಾಮ್ ರಮೇಶ್, ಪ್ರಧಾನಿಯು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು ಸಿದ್ಧರಾಗುತ್ತಿರುವಾಗ, ಅಮೆರಿಕದಲ್ಲಿ ಮೋದಿಯ ಆತ್ಮೀಯ ಸ್ನೇಹಿತ ಟ್ರಂಪ್ ಮತ್ತೊಮ್ಮೆ ಇಂಡೋ-ಪಾಕ್ ಕದನ ವಿರಾಮ ಗೋಷಿಸಲು ನಾನೇ ಕಾರಣ ಎಂದು ಹೇಳಿದ್ದಾರೆ. ಅಮೆರಿಕದೊಂದಿಗಿನ ಹೆಚ್ಚಿದ ವ್ಯಾಪಾರವನ್ನು ಬಳಸಿಕೊಂಡು ಆಪರೇಷನ್ ಸಿಂಧೂರವನ್ನು ನಿಲ್ಲಿಸಿದ್ದೇನೆ ಎಂದು 42 ನೇ ಬಾರಿಗೆ ಟ್ರಂಪ್ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ರಮೇಶ್, ಪ್ರಧಾನಿಯು ಟ್ರಂಪ್ಪರಿಹರಿಸುತ್ತಾರೆಯೇ ಮತ್ತು ಭಾರತ-ಅಮೆರಿಕ ಮಧ್ಯೆ ಹೆಚ್ಚುತ್ತಿರುವ ಬಿಕ್ಕಟ್ಟಿನ ಸಂಬಂಧದ ಬಗ್ಗೆ ಮಾತನಾಡುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.ಅಲ್ಲದೆ, ಲಕ್ಷಾಂತರ ಭಾರತೀಯ H-1B ವೀಸಾ ಹೊಂದಿರುವವರ ಕಳವಳಗಳನ್ನು ಮೋದಿ ಪರಿಹರಿಸುತ್ತಾರೆಯೇ? ತಮ್ಮ ಆಪ್ತ ಮಿತ್ರನ ಸುಂಕಗಳಿಂದಾಗಿ ಜೀವನೋಪಾಯವನ್ನು ಕಳೆದುಕೊಳ್ಳುವ ಕೋಟ್ಯಂತರ ರೈತರು ಮತ್ತು ಕಾರ್ಮಿಕರಿಗೆ ಮೋದಿ ಕೆಲವು ಭರವಸೆಗಳನ್ನು ನೀಡುತ್ತಾರೆಯೇ? ಎಂದಿದ್ದಾರೆ. ಮೋದಿ ಹತಾಶೆಯಲ್ಲಿ ಕೆಲಸ ಮಾಡಿದ ಮತ್ತು ನಾಳೆಯಿಂದ ಜಾರಿಗೆ ಬರುವ ಹೊಸ GST ದರಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿರುವುದನ್ನು ಮೋದಿ ಪುನರಾವರ್ತಿಸುತ್ತಾರೆಯೇ?" ಎಂದು ಕಾಂಗ್ರೆಸ್ ನಾಯಕ ಮೋದಿ ವಿರುದ್ಧ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಅಮೆರಿಕದಲ್ಲಿರುವ ಭಾರತೀಯ ಉದ್ಯೊಗಿಗಳ ಮೇಲೆ ಭಾರಿ ಪರಿಣಾಮ ಬೀರುವ ಹಠಾತ್ ಕ್ರಮದಲ್ಲಿ, ಅಧ್ಯಕ್ಷ ಟ್ರಂಪ್ ವಾರ್ಷಿಕ H-1B ವಲಸೆಯೇತರ ವೀಸಾ ಶುಲ್ಕವನ್ನು $100,000 ಕ್ಕೆ ಹೆಚ್ಚಿಸಲು ಆದೇಶಿಸಿದ್ದಾರೆ.
ಆದರೆ, ಟ್ರಂಪ್ ಆಡಳಿತವು H-1B ವೀಸಾಗಳಿಗೆ ಹೊಸ $100,000 ಶುಲ್ಕವು ಹೊಸ ಅರ್ಜಿಗಳಿಗೆ ಮಾತ್ರ ಅನ್ವಯವಾಗುವ ಒಂದು ಬಾರಿ ಪಾವತಿಯಾಗಿದೆ. ಪ್ರಸ್ತುತ ವೀಸಾ ಹೊಂದಿರುವವರಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಈ ವರ್ಷದ ಆರಂಭದಲ್ಲಿ ಭಾರತ-ಪಾಕಿಸ್ತಾನ ಸಂಘರ್ಷವನ್ನು ವ್ಯಾಪಾರದ ಮೂಲಕ ಪರಿಹರಿಸಿಕೊಂಡೆ ಎಂಬ ತಮ್ಮ ಹೇಳಿಕೆಯನ್ನು ಟ್ರಂಪ್ ಪುನರಾವರ್ತಿಸಿದ್ದಾರೆ ಮತ್ತು ಏಳು ಯುದ್ಧಗಳನ್ನು ಕೊನೆಗೊಳಿಸಿದ್ದಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. (ಏಜೆನ್ಸೀಸ್)