ನಾನು ಇಂಡೋ-ಪಾಕ್​ ಸಂಘರ್ಷ ಸೇರಿದಂತೆ, 7 ಯುದ್ದಗಳನ್ನು ನಿಲ್ಲಿಸಿದ್ದೇನೆ: ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಎಂದ ಟ್ರಂಪ್​| Nobel Peace Prize

Nobel Peace Prize
Published on

Nobel Peace Prize: ಭಾರತ-ಪಾಕಿಸ್ತಾನ ಸಂಘರ್ಷವನ್ನು ವ್ಯಾಪಾರದ ಮೂಲಕ ಪರಿಹರಿಸಿದ್ದೇನೆ ಮತ್ತು ಏಳು ಯುದ್ಧಗಳನ್ನು ಕೊನೆಗೊಳಿಸಿದ್ದಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಅಮೇರಿಕನ್ ಕಾರ್ನರ್‌ಸ್ಟೋನ್ ಇನ್‌ಸ್ಟಿಟ್ಯೂಟ್ ಸ್ಥಾಪಕರ ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್​, ವಿಶ್ವ ವೇದಿಕೆಯಲ್ಲಿ, ನಾವು ಹಿಂದೆಂದೂ ಗೌರವಿಸದ ಮಟ್ಟದಲ್ಲಿ ನಮ್ಮನ್ನು ಗೌರವಿಸುವ ಕೆಲಸಗಳನ್ನು ಮತ್ತೊಮ್ಮೆ ಮಾಡುತ್ತಿದ್ದೇವೆ. ಅಲ್ಲದೆ, ನಾವು ಶಾಂತಿ ಒಪ್ಪಂದಗಳನ್ನು ರೂಪಿಸುತ್ತಿದ್ದೇವೆ, ನಾವು ಯುದ್ಧಗಳನ್ನು ನಿಲ್ಲಿಸುತ್ತಿದ್ದೇವೆ. ಅಲ್ಲದೆ, ಭಾರತ ಮತ್ತು ಪಾಕಿಸ್ತಾನ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಗಳನ್ನು ನಿಲ್ಲಿಸಿದ್ದೇವೆ ಎಂದು ಟ್ರಂಪ್​ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ಇಂಡೋ-ಪಾಕ್​ ಸಂಘರ್ಷವನ್ನು ವ್ಯಾಪಾರದೊಂದಿಗೆ ಹೇಗೆ ನಿಲ್ಲಿಸಿದೆ ಎಂದು ನಿಮಗೆ ತಿಳಿದಿದೆ. ಭಾರತ ವ್ಯಾಪಾರ ಮಾಡಲು ಬಯಸುತ್ತಾರೆ ಎಂದು ತಿಳಿಸಿದ್ದಾರೆ.

ಭಾರತ, ಪಾಕಿಸ್ತಾನ, ಥೈಲ್ಯಾಂಡ್, ಕಾಂಬೋಡಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಕೊಸೊವೊ ಮತ್ತು ಸೆರ್ಬಿಯಾ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ರುವಾಂಡಾ ಮತ್ತು ಕಾಂಗೋ. ನಾವು ಯುದ್ದಗಳನ್ನು ನಿಲ್ಲಿಸಿದ್ದೇವೆ. ಇವುಗಳಲ್ಲಿ ಶೇ,60 ರಷ್ಟು ವ್ಯಾಪಾರದ ಕಾರಣದಿಂದಾಗಿ ನಿಲ್ಲಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ರಷ್ಯಾ ಮತ್ತು ಯುಕ್ರೇನ್ ನಡುವಿನ ಸಂಘರ್ಷವನ್ನು ನಿಲ್ಲಿಸಲು ಸಾಧ್ಯವಾದರೆ, ನನಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಟ್ರಂಪ್​ ಸೂಚಿಸಿದ್ದಾರೆ. ಅಲ್ಲದೆ ನನಗೆ ರಷ್ಯಾ- ಯುಕ್ರೇನ್​ ನಿಲ್ಲಿಸಿದರೆ, ನೀವು ನೊಬೆಲ್ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ನಾನು ಏಳು ಯುದ್ಧಗಳನ್ನು ನಿಲ್ಲಿಸಿದೆ. ಇದು ಒಂದು ಯುದ್ಧ, ಇನ್ನೋಂದು ದೊಡ್ಡ ಯುದ್ಧ ಎಂದು ಟ್ರಂಪ್​ ತಿಳಿಸಿದ್ದಾರೆ.

ರಷ್ಯಾ-ಯುಕ್ರೇನ್ ಸಂಘರ್ಷವನ್ನು ಪರಿಹರಿಸುವುದರ ಬಗ್ಗೆ ಮಾತನಾಡಿದ ಟ್ರಂಪ್​, ನಾನು ಅಧ್ಯಕ್ಷ ಪುಟಿನ್​ರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಪುಟಿನ್​​​ ಬಗ್ಗೆ ನಿರಾಶೆಗೊಂಡಿದ್ದೇನೆ. ಆದರೆ, ನನಗೆ ನಂಬಿಕೆ ಇದೆ. ಇದು ನಿಲ್ಲಿಸುವುದು ಸುಲಭವಾಗಿದೆ ಎಂದು ನಾನು ಭಾವಿಸಿದೆ. ಆದರೆ, ನಾವು ರಷ್ಯಾ -ಯುಕ್ರೇನ್ ಯುದ್ದವನ್ನು ಒಂದಲ್ಲ ಒಂದು ರೀತಿಯಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಟ್ರಂಪ್​ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net