ಅಮೆರಿಕ H1B ವೀಸಾ ಶುಲ್ಕ ಹೆಚ್ಚಳ: ಭಾರತೀಯರ ಮೇಲೆ ಬೀರುವ ಗಂಭೀರ ಪರಿಣಾಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದ MEA

MEA
Published on

MEA: ಅಮೆರಿಕದ H1B ವೀಸಾ ಮೇಲಿನ ನಿರ್ಬಂಧಗಳಿಂದ ಆಗುವ ಸಂಪೂರ್ಣ ಪರಿಣಾಮವನ್ನು ಪರಿಶೀಲಿಸುತ್ತಿರುವುದಾಗಿ ಭಾರತ ಶನಿವಾರ (ಸೆಪ್ಟೆರಂಬರ್,21) ತಿಳಿಸಿದೆ. ಅಲ್ಲದೆ, ಇಂತಹ ಕ್ರಮಗಳು ಅನಿವಾಸಿ ಭಾರತೀಯರ ಮೇಲೆ ತೊಂದರೆಗಳನ್ನು ಸೃಷ್ಟಿಸಬಹುದು ಎಂದು ಭಾರತ ಒತ್ತಿ ಹೇಳಿದೆ.

ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ವಿದೇಶಾಂಗ ಸಚಿವಾಲಯ(MEA), ಅಮೆರಿಕದ ಪ್ರಸ್ತಾವಿತ ನಿರ್ಬಂಧಗಳಿಗೆ ಸಂಬಂಧಿಸಿದ ವರದಿಗಳನ್ನು ಸರ್ಕಾರ ನೋಡಿದೆ. ಈ ಕ್ರಮದ ಸಂಪೂರ್ಣ ಪರಿಣಾಮಗಳನ್ನು ಸಂಬಂಧಪಟ್ಟ ಎಲ್ಲರೂ ಅಧ್ಯಯನ ಮಾಡುತ್ತಿದ್ದಾರೆ. ಭಾರತೀಯ ಉದ್ಯಮವೂ ಸೇರಿದಂತೆ, ಇದು ಈಗಾಗಲೇ H1B ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ಅನುಮಾನಗಳನ್ನು ಸ್ಪಷ್ಟಪಡಿಸುವ ಆರಂಭಿಕ ವಿಶ್ಲೇಷಣೆಯನ್ನು ಹೊರತಂದಿದೆ ಎಂದು ತಿಳಿಸಿದೆ.

ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ಭಾರತೀಯ ಉದ್ಯೋಗಿಗಳ ಉಪಸ್ಥಿತಿಗೆ H1B ಕಾರ್ಯಕ್ರಮವು ಅತ್ಯಗತ್ಯವಾಗಿದೆ. ಹೊಸತನ್ನು ಮತ್ತು ಸೃಜನಶೀಲತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಭಾರತೀಯ ಮತ್ತು ಅಮೇರಿಕನ್ ಕೈಗಾರಿಕೆಗಳೆರಡೂ ಪಾಲನ್ನು ಹೊಂದಿವೆ. ಮುಂದಿನ ಹಾದಿಯಲ್ಲಿ ಸಮಾಲೋಚನೆಗಳಲ್ಲಿ ತೊಡಗಿಸಿಕೊಳ್ಳುವ ನಿರೀಕ್ಷೆಯಿದೆ ಎಂದು MEA ಹೇಳಿದೆ.

ಯುಎಸ್ ಮತ್ತು ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿ, ಆರ್ಥಿಕ ಬೆಳವಣಿಗೆ, ಸ್ಪರ್ಧಾತ್ಮಕತೆ ಮತ್ತು ಸಂಪತ್ತು ಸೃಷ್ಟಿಗೆ ಕೌಶಲ್ಯಪೂರ್ಣ ಪ್ರತಿಭೆಗಳ ಚಲನಶೀಲತೆ ಮತ್ತು ವಿನಿಮಯಗಳು ಅಗಾಧ ಕೊಡುಗೆ ನೀಡಿವೆ ಎಂದು MEA ಹೇಳಿದೆ. ಆದ್ದರಿಂದ ಅಮೆರಿಕದಲ್ಲಿರುವ ನೀತಿ ನಿರೂಪಕರು ಪರಸ್ಪರ ಪ್ರಯೋಜನಗಳನ್ನು ಗಣನೆಗೆ ತೆಗೆದುಕೊಂಡು ಇತ್ತೀಚಿನ ಕ್ರಮಗಳನ್ನು ನಿರ್ಣಯಿಸುತ್ತಾರೆ. ಇದರಲ್ಲಿ ಎರಡೂ ದೇಶಗಳ ನಡುವಿನ ಬಲವಾದ ಸಂಬಂಧಗಳು ಸೇರಿವೆ ಎಂದು MEA ಸೂಚಿಸಿದೆ.

ಇದೇ ಸಮಯದಲ್ಲಿ, ಅಮೆರಿಕದ ನಿರ್ಬಂಧಗಳು ಮಾನವೀಯ ಪರಿಣಾಮಗಳನ್ನು ಬೀರಬಹುದು. ಏಕೆಂದರೆ, ಇಂತಹ ಕ್ರಮಗಳು ಕುಟುಂಬಗಳಿಗೆ ಉಂಟುಮಾಡಬಹುದಾದ ಅಡೆತಡೆಗಳನ್ನು ಗಮನಿಸಿದರೆ. ಅಮೆರಿಕದ ಅಧಿಕಾರಿಗಳು ಅಡೆತಡೆಗಳನ್ನು ಸೂಕ್ತವಾಗಿ ಪರಿಹರಿಸಬಹುದು ಎಂದು ಸರ್ಕಾರ ಆಶಿಸುತ್ತದೆ ಎಂದು ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net