ಗ್ರಹಣಕ್ಕೆ ಹಾಸನಾಂಬೆ ದೇವಾಲಯ ತೆರೆದಿರುತ್ತೋ ಇಲ್ಲವೋ ಎಂದು ಸ್ಪಷ್ಟನೆ ನೀಡಿದ ಅರ್ಚಕ...

ಹಾಸನಾಂಬೆ
Published on

ಹಾಸನ: ನಾಳೆ (ಅ.25)ರಂದು ಗ್ರಹಣ ಇದ್ದು ಸಾವಿರಾರು ಭಕ್ತರು ಹಾಸನಾಂಬೆ ದರ್ಶನಕ್ಕೆ ಕಾಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾತನಾಡಿದ ಹಾಸನಾಂಬೆ ದೇವಸ್ಥಾನದ ಅರ್ಚಕ ನಾಗರಾಜ್ 'ನಾಳೆ ಗ್ರಹಣ ಇರುವ ಕಾರಣ ಹಾಸನಾಂಬೆ ದರ್ಶನ ಇರುವುದಿಲ್ಲ' ಎಂದು ಹೇಳಿದ್ದಾರೆ.

ಗ್ರಹಣದ ಬಗ್ಗೆ ಮಾತನಾಡುತ್ತಾ 'ನಾಳೆ ಗ್ರಹಣ ಇರುವ ಕಾರಣ ಹಾಸನಾಂಬೆ ದೇವಸ್ಥಾನ ತೆರೆದಿರುವುದಿಲ್ಲ. ಯಾರೂ ಕೂಡ ಹಾಸನಾಂಬೆ ದರ್ಶನಕ್ಕೆ ಬರಬೇಡಿ. ನಮ್ಮ ವಿಧಿ ವಿಧಾನ ಇರುವ ಕಾರಣ ಬಂದು ತೊಂದರೆ ಕೊಡಬೇಡಿ' ಎಂದು ಅರ್ಚಕರು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net