ಮಹಿಳೆಗೆ ಕಪಾಳಮೋಕ್ಷ ಪ್ರಕರಣ; ಸೋಮಣ್ಣ ಪರವಾಗಿ ಬ್ಯಾಟಿಂಗ್ ಮಾಡಿದ ಆರ್​. ಅಶೋಕ್

v somanna
Published on

ಬೆಂಗಳೂರು: ಮಹಿಳೆಗೆ ಕಪಾಳಮೋಕ್ಷ ಮಾಡಿದ ಕಾರಣ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಸೋಮಣ್ಣ ಪರವಾಗಿ ಈಗ ಆರ್​ ಅಶೋಕ್​ ಮಾತನಾಡಿದ್ದಾರೆ.

ವಿ ಸೋಮಣ್ಣ, ಗುಂಡ್ಲೂಪೇಟೆ ಸಮೀಪದ ಹಳ್ಳಿಯಲ್ಲಿ ಜಾಗ ಹಂಚಿಕೆ ವಿಚಾರವಾಗಿ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದರು. ಈ ವಿಷಯವನ್ನೇ ಗುರಿಯಾಗಿಸಿಕೊಂಡ ಕಾಂಗ್ರೆಸ್​ ಪ್ರತಿಭಟನೆಯನ್ನು ನಡೆಸಿತ್ತು.

ಈ ಹಿನ್ನೆಲೆಯಲ್ಲಿ ಮಾತನಾಡಿದ ಆರ್​ ಅಶೋಕ್ 'ಇದು ಅಚಾನಾಕ್ ಆಗಿ ನಡೆದ ಘಟನೆ. ಸೋಮಣ್ಣ ಬೇಕು ಅಂತ ಹೀಗೆ ಮಾಡಿಲ್ಲ. ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ ಎಂದು ಆ ಮಹಿಳೆಯೇ ಹೇಳಿದ್ದಾರೆ. ನನಗೆ ಸೈಟ್ ಕೊಟ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಅವರು ಯಾವತ್ತೂ ಸಮಾಜದ ವಿರುದ್ಧ, ಮಹಿಳೆಯರ ವಿರುದ್ಧ ಹೋಗುವ ವ್ಯಕ್ತಿ ಅಲ್ಲ' ಎಂದು ಸೋಮಣ್ಣ ಪರವಾಗಿ ಮಾತನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net