

ಕೊಡಗು: ರಾಜ್ಯದ ಕೆಲವೆಡೆ ಕಾಡುಪ್ರಾಣಿಗಳ ಹಾವಳಿ ಮೇಲಿಂದ ಮೇಲೆ ಕೇಳಿ ಬರುತ್ತಿದ್ದು, ಇದೀಗ ಕಾಡಾನೆಯೊಂದು ಬೆಂಜ್ ಕಾರನ್ನು ಜಖಂಗೊಳಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾರೊಳಗಿದ್ದ ದಂಪತಿ ಸಿನಿಮೀಯ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಕೊಡಗಿನ ಸುಂಟಿಕೊಪ್ಪ ಬಳಿ ಈ ಪ್ರಕರಣ ನಡೆದಿದೆ. ಟಿಪ್ಪು ಎಂಬವರು ಪತ್ನಿ ಜತೆ ಸುಂಟಿಕೊಪ್ಪದಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕಾಡಾನೆ ತನ್ನ ದಂತದಿಂದ ಕಾರಿಗೆ ತಿವಿದಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.
ಮತ್ತಿಕಾಡು ವ್ಯಾಪ್ತಿಯಲ್ಲಿ ಕಾಡಾನೆ ಓಡಿಸುವ ಕಾರ್ಯಾಚರಣೆ ನಡೆಯುತ್ತಿದ್ದ ಕಾರಣ ಈ ಘಟನೆ ನಡೆದಿದೆ. ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಓಡಿ ಬರುತ್ತಿದ್ದ ಕಾಡಾನೆ ಎದುರಿಗೆ ಸಿಕ್ಕ ಇವರ ಕಾರಿನ ಮೇಲೆ ದಾಳಿ ಮಾಡಿದೆ. ಅದೃಷ್ಟವಶಾತ್ ಇಬ್ಬರೂ ಕಾರಿನಿಂದ ಇಳಿದು ಭಾರಿ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.