

Holi: ಹೋಳಿಯ ಹಬ್ಬದಲ್ಲಿ ಪತ್ನಿ ತನ್ನ ಮಾವ(ಗಂಡ)ನಿಗೆ ಬಣ್ಣ ಹಚ್ಚಿದ ಕಾರಣಕ್ಕಾಗಿ ಆಕೆಯನ್ನು ಆತನ ತಾಯಿ ಬೈದಿದ್ದಾಳೆ. ಇದಕ್ಕೆ ಮನನೊಂದ ಯುವತಿ ವಿಷ ಸೇವಿಸಿ ಮೃತಪಟ್ಟಿರುವ ಘಟನೆ ಇದೀಗ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ತಿಕ್ಲುಪರ ಗ್ರಾಮದ ಧನ್ವತಿ ದೇವಿ(30) ಮೃತೆ. ಹೋಳಿ ಹಬ್ಬದಂದು ಬಣ್ಣ ಹಚ್ಚುವ ಬಗ್ಗೆ ನಡೆದ ವಿವಾದವೇ ಸಾವಿಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರಕರಣ ಆಕೆಯ ಗಂಡ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು..?
ಹೋಳಿ ಹಬ್ಬದ ಸಂದರ್ಭದಲ್ಲಿ ಹಳ್ಳಿಯ ಎಲ್ಲಾ ಜನರು ಬಣ್ಣಗಳೊಂದಿಗೆ ಆಟವಾಡುತ್ತಿದ್ದರು. ಈ ಮಧ್ಯೆ, ಧನ್ವತಿ ದೇವಿ ತನ್ನ ಗಂಡನ ಮೇಲೆ ಬಣ್ಣ ಬಳಿದರು. ಇದಕ್ಕಾಗಿ ಆಕೆಯ ಅತ್ತೆ ಗದರಿದ್ದಾಳೆ. ಈ ಬೈಗುಳಕ್ಕೆ ನೊಂದ ಧನ್ವತಿ ಕ್ರಿಮಿನಾಶಕ ವಿಷ ಸೇವಿಸಿದ್ದಾಳೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.(ಏಜೆನ್ಸೀಸ್)