ಸಿನಿ ಸೆಲಿಬ್ರಿಟಿಗಳ ಜತೆ ಆತ್ಮೀಯವಾಗ ಕಾಣಿಸಿಕೊಳ್ಳುವ ಓರ್ರಿ ಯಾರು?; ಆತನ ವಿರುದ್ಧ ಎಫ್​ಐಆರ್ ಆಗಿದ್ದು ಏಕೆ? | Orri

dk - 2025-03-17T154506.539
Published on

Orri: ಕತ್ರಾದಲ್ಲಿರುವ ವೈಷ್ಣವ ದೇವಿ ದೇವಸ್ಥಾನದ ಶಿಬಿರಲ್ಲಿ ಮದ್ಯಪಾನ ಮಾಡಿದ ಆರೋಪದ ಮೇಲೆ ಬಾಲಿವುಡ್​ನ ಕಲಾವಿದ ಓರ್ರಿ ಎಂದೇ ಖ್ಯಾತಿ ಹೊಂದಿರುವ ಓರ್ಹಾನ್ ಅವತ್ರಮಣಿ(Orhan Awatramani) ಸೇರಿ 7 ಜನರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸೋಮವಾರ ವರದಿಯಾಗಿದೆ. ​

ಓರ್ರಿ ಜತೆಗೆ, ದರ್ಶನ್ ಸಿಂಗ್, ಪಾರ್ಥ್ ರೈನಾ, ರಿತಿಕ್ ಸಿಂಗ್, ರಕ್ಷಿತಾ ಭೋಗಲ್, ಶಗುನ್ ಕೊಹ್ಲಿ, ರಾಶಿ ದತ್ತ ಮತ್ತು ರಷ್ಯಾದ ಪ್ರಜೆ ಅನಸ್ತಾಸಿಲಾ ಅರ್ಜಮಸ್ಕಿನಾ ಅವರನ್ನೂ ಎಫ್‌ಐಆರ್‌ನಲ್ಲಿ ಹೆಸರು ಉಲ್ಲೇಖಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್​ ಆದೇಶವನ್ನು ಉಲ್ಲಂಘಿಸಿದ ಮತ್ತು ಧಾರ್ಮಿಕ ಭಾವೆನೆಗಳಿಗೆ ತಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು..?

ಇದೇ ಮಾ.15ರಂದು ವೈಷ್ಣವ ದೇವಿ ದೇವಸ್ಥಾನದ ಶಿಬಿರಲ್ಲಿ ಮದ್ಯಪಾನ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ಬಂದಿತ್ತು. ಕತ್ರಾದಲ್ಲಿ ಮದ್ಯ ಸೇವನೆ ಹಾಗೂ ಮಾಂಸಹಾರವನ್ನು ನಿಷೇಧಿಸಲಾಗಿದೆ. ಅದಗ್ಯೂ ಈ ಎಂಟು ಜನರು ಮದ್ಯ ಸೇವನೆ ಮಾಡುವ ಮೂಲಕ ಆದೇಶವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ, 8 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓರ್ಹಾನ್ ಅವತ್ರಮಣಿ ಯಾರು?

ಓರ್ಹಾನ್ ಅವತ್ರಮಣಿ 500ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ರಭಾವಿ. ಇನ್ನು ಇವರು ಓರ್ರಿ ಎಂದು ಜನಪ್ರಿಯರಾಗಿದ್ದಾರೆ. ಅವರು ತಮ್ಮನ್ನು ತಾವು ಪ್ರಯಾಣಿಕ, ಫ್ಯಾಷನ್ ಐಕಾನ್ ಮತ್ತು ಮುಂದಿನ ಪೀಳಿಗೆಯ ಬಾಲಿವುಡ್ ತಾರೆಯರ ಸ್ನೇಹಿತ ಎಂದು ಕರೆದುಕೊಂಡಿದ್ದಾರೆ. ಅಲ್ಲದೆ, ಅವರು ಫ್ಯಾಷನ್ ಶೋಗಳು, ಚಲನಚಿತ್ರ ಪ್ರೀಮಿಯರ್‌ಗಳು ಮತ್ತು ಬಾಲಿವುಡ್ ಪಾರ್ಟಿಗಳಿಗೆ ಹಾಜರಾಗುತ್ತಾರೆ. ಈ ವೇಳೆ ತಾರೆಯವ ಜತೆಯಲ್ಲಿ ವಿಭಿನ್ನ ಲುಕ್​​ನಲ್ಲಿ ಫೋಟೋಶೂಟ್​ಗೆ ಪೋಸ್​​ ನೀಡುವ ಮೂಲಕ ಅವರ ಕೆಲವು ಚಿತ್ರಗಳು ವೈರಲ್ ಆದಾಗ ಬೆಳಕಿಗೆ ಬಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net