ಅತ್ತ ಪತ್ನಿಯ ಸಾವು, ಇತ್ತ ಪತಿ ಆತ್ಮಹತ್ಯೆ!

death
Published on

ಕಲಬುರಗಿ: ಪತ್ನಿ ಸತ್ತ ಮರುದಿನವೇ ಪತಿಯೂ ಸಾವಿನ ಮನೆಯ ಕದಟ್ಟಿದ್ದಾನೆ. ಮಹಾರಾಷ್ಟ್ರದ ಪುಣೆಯಲ್ಲಿದ್ದ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಳು. ಈ ಸುದ್ದಿ ಕೇಳಿದ ಪತಿ ಕಮಲಾಪುರ ತಾಲೂಕಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡಿದ್ದಾನೆ.

ಕಮಲಾಪುರ ತಾಲೂಕಿನ ಲಾಡ ಮುಗಳಿ ಗ್ರಾಮದ ನಿವಾಸಿ ದೇವಾ ಗುತ್ತೇದಾರ್ (28) ಆತ್ಮಹತ್ಯೆ ಮಾಡಿಕೊಂಡವ. ದೇವಾ ಗುತ್ತೇದಾರ್​ನ ಪತ್ನಿ ಜ್ಯೋತಿ ನಿನ್ನೆ(ಗುರುವಾರ) ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಪತ್ನಿಯ ಸಾವಿನ ಸುದ್ದಿ ಕೇಳಿದ ಗಂಡ ತೀವ್ರ ಆಘಾತಕ್ಕೊಳಗಾಗಿದ್ದ. ಮನನೊಂದ ಆತ ಇಂದು(ಶುಕ್ರವಾರ) ಗ್ರಾಮದಲ್ಲಿ ಮರವೊಂದಕ್ಕೆ ನೇಣುಬಿಗಿದುಕೊಂಡು ಸತ್ತಿದ್ದಾನೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿರಿ  Video| ಬಿಜೆಪಿ ಮುಖಂಡನ ಬರ್ತ್ ​ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net