ಜೆಡಿಎಸ್​ಗೆ ಮತ್ತೊಂದು ಶಾಕ್​! ಮುಂದಿನ ವಾರವೇ ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ

madhu bangarappa
Published on

ಬೆಂಗಳೂರು: ಲೋಕಸಭಾ ಚುನಾವಣಾ ಸೋಲಿನ ಬಳಿಕ ಜೆಡಿಎಸ್​ ಚಟುವಟಿಕೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳದ ಜೆಡಿಎಸ್‌ ಮುಖಂಡ ಮಧುಬಂಗಾರಪ್ಪ, ಕಾರ್ಯಕರ್ತರ ವಿಶ್ವಾಸವನ್ನು ಜೆಡಿಎಸ್ ಕಳೆದುಕೊಂಡಿದೆ ಎಂದು ಕಳೆದ ವರ್ಷ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಆ ಮೂಲಕ ಪಕ್ಷಾಂತರ ಮಾಡುವ ಗುಮಾನಿ ಮೂಡಿಸಿದ್ದ ಮಧುಬಂಗಾರಪ್ಪ, ಇದೀಗ ಜೆಡಿಎಸ್​ ತೊರೆದು ಕಾಂಗ್ರೆಸ್​ ಮನೆಗೆ ಕಾಲಿಡುವ ಕಾಲ ಸನಿಹದಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ನಿವಾಸದಲ್ಲಿ ಇಂದು(ಗುರುವಾರ) ಕೆಲ ಕಾಲ ಮಧುಬಂಗಾರಪ್ಪ ಸಮಾಲೋಚನೆ ನಡೆಸಿದರು. ಇದನ್ನೂ ಓದಿರಿ ಆಂಜನೇಯ ದೇಗುಲಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದ ಕಿಡಿಗೇಡಿಗಳು!

ಮಧು ಬಂಗಾರಪ್ಪ ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಮುಂದಿನ ವಾರದಲ್ಲಿಯೇ... ಎಂದು ಡಿಕೆಶಿ ತಿಳಿಸಿದರು. ನನ್ನ ಮಗಳ ಮದುವೆ ಮುಗಿದ ಬಳಿಕ ಪಕ್ಷ ಸೇರ್ಪಡೆ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಡಿಕೆಶಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net