ಬಾಯ್​ಫ್ರೆಂಡ್ ನೆರವಿನಿಂದ ಗಂಡನನ್ನು ಮುಗಿಸಿದ ಪತ್ನಿ: 2 ವರ್ಷಗಳ ನಂತರ ಮಗಳಿಂದ ರಹಸ್ಯ ಬಯಲು

police 02
ಸಾಂದರ್ಭಿಕ ಚಿತ್ರ
Published on

ಗುರುಗ್ರಾಮ್​: ವ್ಯಕ್ತಿಯೊಬ್ಬ ಮೃತಪಟ್ಟ ಎರಡು ವರ್ಷಗಳ ಬಳಿಕ ಸಾವಿನ ರಹಸ್ಯ ಬಯಲಾಗಿದ್ದು, 12 ವರ್ಷದ ಬಾಲಕಿಯೇ ತನ್ನ ತಾಯಿಯ ಶೋಷಣೆಯನ್ನು ಬಹಿರಂಗಪಡಿಸಿರುವ ಘಟನೆ ಹರ್ಯಾಣದ ಗುರುಗ್ರಾಮ್​ದಲ್ಲಿ ನಡೆದಿದೆ.

ಕನ್ವರ್ ಸಿಂಗ್ ಎಂಬಾತ 2008ರಲ್ಲಿ ಪೂನಂ ಯಾದವ್​ ಎಂಬಾಕೆಯನ್ನು ವಿವಾಹವಾಗಿದ್ದು, ಈ ದಂಪತಿಗಳಿಗೆ ಓರ್ವ ಮಗಳು ಹಾಗೂ ಮಗನಿದ್ದಾನೆ. ಕನ್ವರ್​ ಸಿಂಗ್​ ತನ್ನ ಹೆಂಡತಿಗೆ ಓದಿಸಿ ನರ್ಸ್ ಕೆಲಸ ಕೊಡಿಸುವಲ್ಲಿ ಸಹಾಯ ಮಾಡಿದ್ದನು. ಕೆಲಸ ಸಿಕ್ಕ ಮೇಲೆ ಆಕೆ ಸೊಹ್ನಾದಲ್ಲಿ ವಾಸಿಸಲು ಪ್ರಾರಂಭಿಸಿದ್ದಳು.

ದಿನಗಳೆದಂತೆ ದಂಪತಿಗಳ ನಡುವೆ ಭಿನ್ನಬಿಪ್ರಾಯ ಮೂಡಿ ಜಗಳವಾಗಿದ್ದು, 2021ರ ಆಗಸ್ಟ್ 14ರಂದು ಕನ್ವರ್ ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ಹೆಂಡತಿಯ ಬಳಿಗೆ ಹೋಗಿದ್ದನು. ಆದರೆ ಎರಡು ದಿನಗಳ ನಂತರ ಆತನ ಮೃತದೇಹ ರೈಲ್ವೆ ಹಳಿಯಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಪೊಲೀಸರು ಇದನ್ನು ರೈಲು ಅಪಘಾತವೆಂದು ತೀರ್ಮಾನಿಸಿ ಶವಪರೀಕ್ಷೆ ನಡೆಸಿದ ನಂತರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದು, ಕನ್ವರ್​ನ ದೇಹವನ್ನು ಸುಡಲಾಗಿತ್ತು.

ಇದಾದ ಬಳಿಕ ಇಬ್ಬರು ಮಕ್ಕಳು ಪೂನಂ ಜೊತೆ ವಾಸಿಸುತ್ತಿದ್ದು, ಕೊನೆಗೆ ಇತ್ತೀಚಿಗೆ ತನ್ನ ಮಕ್ಕಳನ್ನು ಗಂಡನ ಸಹೋದರನಿಗೆ ಒಪ್ಪಿಸಿ ಹೋಗಿದ್ದಳು. ನಂತರ ಪೂನಂನ ಮಗಳು ತನ್ನ ಚಿಕ್ಕಪ್ಪನಿಗೆ ತನ್ನ ತಾಯಿಯ ಸ್ನೇಹಿತ ಕಾರ್ತಿಕ್ ಅಲಿಯಾಸ್ ಕಾಲು ಮನೆಗೆ ಬರುತ್ತಾನೆ ಮತ್ತು ಇಬ್ಬರೂ ಒಟ್ಟಿಗೆ ವಾಸಿಸುತ್ತಾರೆ. ಮನೆಯಲ್ಲಿ ಒಟ್ಟಿಗೆ ಕುಳಿತು ಮದ್ಯಪಾನ ಮತ್ತು ಸಿಗರೇಟು ಸೇದುತ್ತಾರೆ. ಕಾಲುವಿನ ಅನೇಕ ಸ್ನೇಹಿತರು ಕೂಡ ಆಗಾಗ ಮನೆಗೆ ಬಂದು ಮದ್ಯ ಸೇವಿಸುತ್ತಾರೆ ಎಂದು ಹೇಳಿದ್ದಾಳೆ.

ಇದನ್ನು ತಿಳಿದ ಕನ್ವರ್​ನ ಸಹೋದರ ಸಂಜಯ್​ಗೆ ಅನುಮಾನ ಶುರುವಾಗಿದ್ದು, ಕೂಡಲೇ ಪೊಲೀಸರಿಗೆ ತನ್ನ ಸಹೋದರ ಸಾವಿನ ಕುರಿತು ದೂರು ನೀಡಿದ್ದಾನೆ. ಪೂನಂ ತನ್ನ ಸಹೋದರನ ಸೋದರ ಮಾವ ಮಥುರಾದ ಕಾರ್ತಿಕ್ ಅಲಿಯಾಸ್​ ಕಾಲು ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಆಕೆ ಮತ್ತು ಆತ ಸೇರಿ ತನ್ನ ಸಹೋದರನನ್ನು ಕೊಲೆ ಮಾಡಿ ಶವವನ್ನು ಹಳಿ ಮೇಲೆ ಎಸೆದಿದ್ದಾರೆ ಎಂದು ಆರೋಪಿಸಿದ್ದಾನೆ. ಪ್ರಾಥಮಿಕ ತನಿಖೆಯ ನಂತರ, ಈಗ GRP ಗುರುಗ್ರಾಮ್ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷ್ಯ ನಾಶದ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net