ಪತಿ ಕಪ್ಪಗಿದ್ದಾನೆಂದು Suicide ಮಾಡಿಕೊಂಡ ನವವಿವಾಹಿತೆ!

Suicide
Published on

ಹತ್ರಾಸ್​: ತನ್ನ ಪತಿ ಬೆಳ್ಳಗಿಲ್ಲ ಎಂಬ ಕಾರಣಕ್ಕೆ ನವವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಹತ್ರಾಸ್​ನಲ್ಲಿ ನಡೆದಿದೆ. ಆ ಮಹಿಳೆಗೆ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು ಎಂದು ವರದಿಯಾಗಿದೆ.

ಮೃತರನ್ನು ಸಿಮ್ರಾನ್ (25)​ ಎಂದು ಗುರುತಿಸಲಾಗಿದ್ದು, ಈಕೆ ಬರೌಲಾದ ಅಲಿಗಢದ ಜಫರಾಬಾದ್ ನಿವಾಸಿಯಾಗಿದ್ದರು. ನಾಲ್ಕು ತಿಂಗಳ ಹಿಂದೆ ತೌಫಿಕ್​ ಎಂಬಾತನ ಜೊತೆ ಈಕೆಯ ಮದುವೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ತೌಫಿಕ್​ ಪೇಂಟರ್​ ಆಗಿ ಕೆಲಸ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದಷ್ಟೇ ಸಿಮ್ರಾನ್​ ಜೊತೆ ಈತನ ಮದುವೆ ಮಾಡಲಾಗಿತ್ತು. ತೌಫಿಕ್ ತನ್ನ ಪತ್ನಿಯೊಂದಿಗೆ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದ. ತೌಫಿಕ್ ಕೆಲಸಕ್ಕೆ ತೆರಳಿದ ಬಳಿಕ ಆತನ ಪತ್ನಿ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ (Suicide). ಇದನ್ನು ಗಮನಿಸಿದ ನೆರೆ ಮನೆಯವರು ಕೂಡಲೇ ಪೊಲೀಸರು ಹಾಗೂ ಆಕೆಯ ಪತಿಗೆ ಮಾಹಿತಿ ನೀಡಿದ್ದಾರೆ.

ಸಿಮ್ರಾನ್​ ಯಾವ ಕಾರಣಕ್ಕೆ ಆತ್ಮಹತ್ಯೆ (Suicide) ಮಾಡಿಕೊಂಡಿರಬಹುದು ಎಂದು ವಿಚಾರಿಸಿದಾಗ ಆಕೆಗೆ ಈ ಮದುವೆಗೆ ಇಷ್ಟವಿರಲಿಲ್ಲವಂತೆ. ತನ್ನ ಪತಿ ಕಪ್ಪಗಿದ್ದು, ಆಕೆ ಬಿಳಿ ಬಣ್ಣದ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದಳು. ಆದರೆ, ಕುಟುಂಬಸ್ಥರು ಇದ್ಕಕೆ ಅವಕಾಶ ನೀಡಿರಲಿಲ್ಲ. ಮೃತನ ಸಹೋದರ ಫಕ್ರುದ್ದೀನ್ ಹೇಳಿಕೆಯನ್ನು ಪಡೆದಿದ್ದು, ಆಕೆಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾನೆ. ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು (Senior Police Officer) ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net