

ಬೆಂಗಳೂರು: ಈಗಾಗಲೇ ಸಾಕಷ್ಟು ವಿವಾದ ಹಾಗೂ ಗಲಾಟೆಗಳಿಂದಲೇ ಸದ್ದು ಮಾಡಿರುವ ಬಿಗ್ಬಾಸ್ 11ನೇ ಆವೃತ್ತಿಯೂ (Bigg Boss Season 11) ಒಂದಿಲ್ಲೊಂದು ಕಾರಣಕ್ಕೆ ವೀಕ್ಷಕರ ಗಮನ ಸೆಳೆಯುತ್ತಿದೆ. ಈಗಾಗಲೇ ಕಾರ್ಯಕ್ರಮ ಸಾಕಷ್ಟು ಜನಮನ್ನಣೆ ಪಡೆದಿದ್ದು, ಈ ವಾರ ಮನೆಗೆ ಅತಿಥಿಯಾಗಿ ಸಾಹಿತಿ, ನಿರ್ದೇಶಕ ಯೋಗರಾಜ್ ಭಟ್ (Yograj Bhat) ಬಂದಿದ್ದಾರೆ.
ಮಾತೃ ವಿಯೋಗದಿಂದ ಈ ವಾರ ನಿರೂಪಕ ಸುದೀಪ್ ಅವರು ವಾರದ ಕತೆಯನ್ನು ನಡೆಸಿಕೊಡುತ್ತಿಲ್ಲ. ಈ ಕಾರಣಕ್ಕೆ ಬಿಗ್ಬಾಸ್ (Bigg Boss) ಮನೆಗೆ ಯೋಗರಾಜ್ ಭಟ್ ಅವರನ್ನು ಈ ವಾರದ ಪಂಚಾಯ್ತಿ ನಡೆಸಿಕೊಡಲು ವಾಹಿನಿ ಕಳಿಸಿಕೊಟ್ಟಿದ್ದು, ಸ್ಫರ್ಧಿಗಳ ಜೊತೆ ಭಟ್ರು ತಮ್ಮದೇ ದಾಟಿಯಲ್ಲಿ ಮಾತನಾಡಿದ್ದಾರೆ. ಈ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದು ಪಕ್ಕಾ ಆಗಿದೆ.
ಇನ್ನೂ ಬಿಗ್ಬಾಸ್ (Bigg Boss) ಮನೆಗೆ ಕಳೆದ ವಾರ ವೈಲ್ಡ್ಕಾರ್ಡ್ ಮೂಲಕ ಹನುಮಂತು ಎಂಟ್ರಿ ಕೊಟ್ಟಿದ್ದರು. ಹನುಮಂತು ಮುಗ್ದತೆ ಕಂಡು ಮನೆ ಮಂದಿ ಎಲ್ಲಾ ಫಿದಾ ಆಗಿದ್ದರು. ಇಷ್ಟೊಂದು ಮುಗ್ದ ಹೇಗೆ ಅಷ್ಟೊಂದು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು ಎಂದು ವೀಕ್ಷಕರು ಪ್ರಶ್ನಿಸಿದ್ದು, ಈ ಬಗ್ಗೆ ಯೋಗರಾಜ್ ಭಟ್ ಮನೆಯ ಸ್ಫರ್ಧಿಗಳಿಗೆ ಹನುಮಂತು ಬಗ್ಗೆ ಅಭಿಪ್ರಾಯವನ್ನು ತಿಳಿಸುವಂತೆ ಹೇಳುತ್ತಾರೆ. ಕಡೆಯಲ್ಲಿ ಯೋಗರಾಜ್ ಭಟ್ ಹನುಮಂತು ಬಗ್ಗೆ ಮಾತನಾಡಿದ್ದು, ಇದರ ವಿಡಿಯೋ ಸಖತ್ ವೈರಲ್ ಆಗಿದೆ.
ಸರ್ ಆತನಿಗೆ ಬುದ್ದಿವಂತಿಕೆ ಇದೆ ದಡ್ಡನಲ್ಲ. ಬುದ್ದಿವಂತಿಕೆ ಇರಲಿಲ್ಲವೆಂದರೆ ಅಷ್ಟೊಂದು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಆತನಲ್ಲಿ ಆ ತಲೆಯಿದ್ದು ರಿಯಾಲಿಟಿ ಶೋಗಳಲ್ಲಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಸ್ಫರ್ಧಿಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಗರಾಜ್ ಭಟ್ ಮಾತನಾಡಿದ್ದು,ಹನುಮಂತು ನೀನು ಬಹಳ ಕಂತ್ರಿ, ಖತರ್ನಾಕ್ ಇದ್ದೀಯಾ ಎಂದು ಹೇಳಿದ್ದಾರೆ. ಈ ಪ್ರೋಮೋ ಈಗ ಸಖತ್ ವೈರಲ್ ಆಗಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (Bigg Boss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಪಾಪ್ಯೂಲರ್ ಆಗಿದೆ ಎಂದರೆ ತಪ್ಪಾಗಲಾರದು.