ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ MEIL ಫೌಂಡೇಶನ್​​ನಿಂದ 200 ಕೋಟಿ ರೂ. ; ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಸಮ್ಮುಖದಲ್ಲಿ ಒಡಂಬಡಿಕೆ

MEIL
Published on

ಹೈದರಾಬಾದ್: ತೆಲಂಗಾಣದ ಯುವಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ದೇಶದ ಪ್ರಮುಖ ಮೂಲಸೌಕರ್ಯ ಸಂಸ್ಥೆಯಾಗಿರುವ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL)ನ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಎಂಇಐಎಲ್ ಫೌಂಡೇಶನ್ನಿಂದ ಹೈದರಾಬಾದ್‌ನಲ್ಲಿ ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿ ನಿರ್ಮಿಸಲು 200 ಕೋಟಿ ರೂ. ದೇಣಿಗೆ ನೀಡುವ ಒಡಂಬಡಿಕೆ ಹಸ್ತಾಕ್ಷರ ಮಾಡಿದೆ.

ತೆಲಂಗಾಣ ಸರ್ಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಈ ವಿಶ್ವ ವಿದ್ಯಾಲಯವು ಕೌಶಲ್ಯ ಮತ್ತು ಉದ್ಯಮಶೀಲತೆಯಲ್ಲಿ ಸುಧಾರಿತ ತರಬೇತಿಯನ್ನು ಒದಗಿಸುವ ಮೂಲಕ ಯುವಜನರಿಗೆ ಉಜ್ವಲ ಭವಿಷ್ಯಕ್ಕೆ ಅಗತ್ಯವಾದ ಕೌಶಲ್ಯ ನೀಡಲಿದ್ದು, ಶನಿವಾರ ಎಂಇಐಎಲ್ ಈ ಸಂಬಂಧ ʼಯಂಗ್‌ ಇಂಡಿಯಾ ಕೌಶಲ್ಯ ಯೂನಿವರ್ಟಿಸಿ ಜೊತೆ ಒಡಂಬಡಿಕೆಗೆ ಸಹಿ ಹಾಕಿದೆ.

ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ತೆಲಂಗಾಣ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ, ವಿಶೇಷ ಮುಖ್ಯ ಕಾರ್ಯದರ್ಶಿ ಜಯೇಶ್ ರಂಜನ್ ಮತ್ತು ವಿಶ್ವವಿದ್ಯಾಲಯದ ಉಪಕುಲಪತಿ ವಿಎಲ್‌-ವಿಎಸ್ಎಸ್ ಸುಬ್ಬರಾವ್ ಅವರ ಸಮ್ಮುಖದಲ್ಲಿ ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

MEIL

ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ, ಸಚಿವರಾದ ಶ್ರೀಧರ್ ಬಾಬು, ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ಸಂಸದ ಅನಿಲ್ ಕುಮಾರ್ ಯಾದವ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು. ಎಂಇಐಎಲ್ ನಿಯೋಗದ ನೇತೃತ್ವ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ರೆಡ್ಡಿ ಅವರು, ಈ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಯುವಕರನ್ನು ಬೆಂಬಲಿಸುವ ಸಂಸ್ಥೆಯ ದೃಷ್ಟಿಕೋನವನ್ನು ಹಂಚಿಕೊಂಡರು. ಆಗಸ್ಟ್‌ನಲ್ಲಿ, ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಹೈದರಾಬಾದ್‌ನ ಹೊರವಲಯದ ಕಂದುಕುರು ಮಂಡಲದ ಮೀರ್ ಖಾನ್ ಪೇಟಾದಲ್ಲಿ 57 ಎಕರೆಯ ವಿಶಾಲವಾದ ಸ್ಥಳದಲ್ಲಿ ವಿಶ್ವವಿದ್ಯಾಲಯಕ್ಕೆ ಅಡಿಪಾಯ ಹಾಕಿದ್ದರು.

ಕೌಶಲ್ಯವೃದ್ಧಿಗೆ ನಿಟ್ಟಿನ ಈ ಉದಾರ ಬೆಂಬಲಕ್ಕಾಗಿ ಮುಖ್ಯಮಂತ್ರಿಗಳು ಎಂಇಐಎಲ್ ತಂಡವನ್ನು ಶ್ಲಾಘಿಸಿದರು ಮತ್ತು ವಿಶ್ವವಿದ್ಯಾಲಯವನ್ನು ಸುಧಾರಿತ ತರಗತಿ ಕೊಠಡಿಗಳು, ವಸತಿ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳಿಗೆ ಇತರ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸುವ ಸರ್ಕಾರದ ಯೋಜನೆಯನ್ನು ವಿವರಿಸಿದರು.

ತನ್ನ ಸಾಮಾಜಿಕ ಬದ್ಧತೆಯ ಮೂಲಕ, ಎಂಇಐಎಲ್ ಫೌಂಡೇಶನ್ ಯುವಕರನ್ನು ಉನ್ನತೀಕರಿಸುವ, ಕೌಶಲ್ಯಗಳನ್ನು ಪೋಷಿಸುವ ಮತ್ತು ಮುನ್ನಡೆಸಲು ಮತ್ತು ಹೊಸತನಕ್ಕೆ ಸಿದ್ಧವಾಗಿರುವ ಪೀಳಿಗೆಯನ್ನು ನಿರ್ಮಿಸುವ ಮಹತ್ವಾಕಾಂಕ್ಷೆಗೆ ಬೆಂಬಲವಾಗಿ ನಿಂತಿದೆ. ಈ ಯೋಜನೆಯು ಭಾರತದ ಯುವ ಪ್ರತಿಭೆಗಳಿಗೆ ಉಜ್ವಲ, ಸ್ವಾವಲಂಬಿ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಹೆಜ್ಜೆಯಾಗಿದೆ. ಈ ಕೌಶಲ್ಯ ಯೂನಿವರ್ಟಿಸಿ ಕ್ಯಾಂಪಸ್‌ ಅಕಾಡೆಮಿಕ್ ಬ್ಲಾಕ್, ಆಡಳಿತಾತ್ಮಕ ಬ್ಲಾಕ್, ಗ್ರಂಥಾಲಯ ಮತ್ತು ಕಂಪ್ಯೂಟರ್ ಹಬ್, ಕಾರ್ಯಾಗಾರಗಳು ಮತ್ತು ಪ್ರಯೋಗಾಲಯ ಬ್ಲಾಕ್, ವಿದ್ಯಾರ್ಥಿ ವಸತಿ ಮತ್ತು ಬೋಧಕ ವಸತಿ, ಅತಿಥಿ ಬೋಧಕ ವಸತಿ ಮತ್ತು ವಿಸಿ, ರಿಜಿಸ್ಟ್ರಾರ್ ನಿವಾಸಗಳು, ಉಪಯುಕ್ತತೆಗಳು, 700 ಆಸನಗಳ ಸಭಾಂಗಣ ಮತ್ತು ಕಾನ್ಫರೆನ್ಸ್ ಕೊಠಡಿಗಳು ಇತ್ಯಾದಿಗಳನ್ನು ಹೊಂದುವ ಮೂಲಕ ದೇಶದ ಬೃಹತ್‌ ಕೌಶಲ್ಯ ತರಬೇತಿ ಕೇಂದ್ರವಾಗಿ ರೂಪುಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net