Gautam Gambhir ಕೋಚ್​ ಆದ ಬಳಿಕ ಸರಣಿಗಳ ಸೋಲು; ಬೇಡದ ದಾಖಲೆಗೆ ಕೊರಳೊಡ್ಡಿದ Team India

Gambhir Rohit
Published on

ಪುಣೆ: ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ (Test Series) ಭಾರತ ತಂಡ (Team India) ಸೋಲುಂಡಿದ್ದು, ಸರಣಿಯನ್ನು ತಮ್ಮ ಕೈ ವಶಮಾಡಿಕೊಳ್ಳುವಲ್ಲಿ ಪ್ರವಾಸಿ ತಂಡ ಯಶಸ್ವಿಯಾಗಿದೆ. 1955ರ ಬಳಿಕ ಭಾರತದ ನೆಲದಲ್ಲಿ ಸರಣಿ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿರುವ ನ್ಯೂಜಿಲೆಂಡ್​ (NewZealand) ತಂಡಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಟೀಮ್​ ಇಂಡಿಯಾಗೆ (Team India) ಭಾರೀ ಮುಖಭಂಗವಾಗಿದೆ. ತವರಿ ನೆಲದಲ್ಲಿ 12 ವರ್ಷಗಳ ಬಳಿಕ ಟೆಸ್ಟ್​ ಸರಣಿಯಲ್ಲಿ ಭಾರತ ಸೋಲು ಕಂಡಿದ್ದು, ಇದಕ್ಕೆ ನಾಯಕ ಹಾಗೂ ಕೋಚ್​ನ ತಪ್ಪು ನಿರ್ಧಾರಗಳೇ ಕಾರಣ ಎಂದು ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ. ಮುಖ್ಯವಾಗಿ ಗೌತಮ್​ ಗಂಭೀರ್​ (Gautam Gambhir) ವಿರುದ್ಧ ಫ್ಯಾನ್ಸ್​ ಕಿಡಿಕಾರುತ್ತಿದ್ದಾರೆ.

ಏಕೆಂದರೆ ಗೌತಮ್​ ಗಂಭೀರ್​ (Gautam Gambhir) ಕೋಚ್​ ಆದ ಬಳಿಕ ನಡೆಯುತ್ತಿರುವ ಮೂರನೇ ಸರಣಿ ಇದಾಗಿದ್ದು, ಸಿಹಿಗಿಂತ ಹೆಚ್ಚಾಗಿ ಕಹಿಯೇ ಲಭಿಸಿದೆ. ಕೋಚ್​ ಆಗಿ ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ತಂಡ ಹೀನಾಯವಾಗಿ ಸೋಲುಂಡಿತ್ತು. ಅಲ್ಲದೇ ಶ್ರೀಲಂಕಾ ವಿರುದ್ಧದ ಈ ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಆಲೌಟ್​ ಆಗಿತ್ತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಟೀಮ್​ ಇಂಡಿಯಾ (Team India) ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಆಲೌಟ್ ಆದ ಬೇಡದ ದಾಖಲೆ ಬರೆಯಿತು.

ಕಳೆದ 45 ವರ್ಷಗಳಲ್ಲಿ ಭಾರತ ತಂಡವು ಒಂದು ವರ್ಷದಲ್ಲಿ ಯಾವುದೇ ಏಕದಿನ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದಿರುವುದು ಇದೇ ಮೊದಲು. ಈ ವರ್ಷ ಆಡಿರುವ ಮೂರು ಏಕದಿನ ಪಂದ್ಯಗಳ ಪೈಕಿ ಭಾರತ ಎರಡರಲ್ಲಿ ಸೋಲುಂಡಿದ್ದು, ಒಂದರಲ್ಲಿ ಟೈ ಮಾಡಿಕೊಂಡಿತ್ತು. ಇದಲ್ಲದೆ ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲೂ ಭಾರತ ತಂಡ ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದು, 36 ವರ್ಷಗಳ ನಂತರ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಸೋತ ಬೇಡದ ದಾಖಲೆ ಬರೆಯಿತು. ಇದಕ್ಕೂ ಮುನ್ನ ನ್ಯೂಜಿಲೆಂಡ್ 1988ರಲ್ಲಿ ಭಾರತದಲ್ಲಿ ಟೆಸ್ಟ್ ಗೆದ್ದಿತ್ತು. ಇದಲ್ಲದೆ ತವರು ನೆಲದಲ್ಲಿ 12 ವರ್ಷಗಳ ಬಳಿಕ ಟೆಸ್ಟ್​ ಸರಣಿ ಸೋತ ತಂಡ ಎಂಬ ಬೇಡದ ದಾಖಲೆಗೆ ಕೊರಳೊಡಿದ್ದು, ಇದು ಗೌತಮ್​ ಗಂಭೀರ್​ (Gautam Gambhir) ಅವರ ಕೋಚಿಂಗ್​ ಅವಧಿಯಲ್ಲಿ ನಡೆದಿರುವುದು ಹಲವರ ಕಣ್ಣು ಕೆಂಪಗಾಗಿಸಿದೆ.

Gambhir Sharma

ಈ ಸರಣಿಗೂ ಮುನ್ನ ಟೀಂ ಇಂಡಿಯಾ ತವರಿನಲ್ಲಿ ಸತತ 18 ಟೆಸ್ಟ್ ಸರಣಿಗಳನ್ನು ಗೆದ್ದಿತ್ತು. ಆದರೆ ಈಗ ಈ ಗೆಲುವಿನ ಸರಣಿಗೆ ಬ್ರೇಕ್ ಬಿದ್ದಿದೆ. ಭಾರತ 4302 ದಿನಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. 2024 ರ ಟಿ20 ವಿಶ್ವಕಪ್​ ಗೆಲ್ಲುವುದರೊಂದಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಕೊನೆಗೊಂಡಿತ್ತು. ಆ ನಂತರ ಗೌತಮ್ ಗಂಭೀರ್ ಅವರಿಗೆ ಈ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಗೌತಮ್ ಗಂಭೀರ್ ಈ ಜವಬ್ದಾರಿ ಹೊತ್ತ ಅಲ್ಪಾವಧಿಯಲ್ಲಿ ಟೀಂ ಇಂಡಿಯಾ ಹಲವು ನಾಚಿಕೆಗೇಡಿನ ದಾಖಲೆಗಳನ್ನು ಮಾಡಿದೆ.

ಐಪಿಎಲ್​ನಲ್ಲಿ ಮೆಂಟರ್​ ಆಗಿ ದಶಕದ ಬಳಿಕ ಕೊಲ್ಕತ್ತಾ ನೈಟ್​ರೈಡರ್ಸ್​ ಕಪ್​ ಬರವನ್ನು ನೀಗಿಸುವಲ್ಲಿ ಗೌತಮ್​ ಗಂಭೀರ್​ (Gautam Gambhir) ಯಶಸ್ವಿಯಾಗಿದ್ದರು. ಐಪಿಎಲ್​ನಲ್ಲಿ ಸಿಕ್ಕ ಮನ್ನಣೆ ಕಂಡು ಬಿಸಿಸಿಐ ಅವರಿಗೆ ಟೀಮ್​ ಇಂಡಿಯಾ (Team India) ಕೋಚ್ ಹುದ್ದೆ ನೀಡಿತ್ತು. ಆದರೆ, ಗಂಭೀರ್​ (Gautam Gambhir) ಕೋಚ್​ ಆದ ಬಳಿಕ ಟೀಮ್​ ಇಂಡಿಯಾ ಸೋಲಿನ ಸುಳಿಗೆ ಸಿಲುಕಿಕೊಂಡಿದ್ದು, ಮುಂಬರುವ ಮಹತ್ವದ ಟೂರ್ನಿಗಳಲ್ಲಿ ತಂಡದ ಪ್ರದರ್ಶನ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.

https://www.vijayavani.net/yograj-bhat-reveals-bigg-boss-contestant-hanumanthus-true-face

https://www.vijayavani.net/meil-donates-200cr-for-construction-of-young-india-skills-university

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net