ಮಿಲ್ಖಾ ಸಿಂಗ್ 'ಫ್ಲೈಯಿಂಗ್ ಸಿಖ್' ಆಗಿದ್ದು ಹೇಗೆ ಗೊತ್ತಾ? ಪಾಕ್​ ನೆಲದಲ್ಲಿ ಅವರ ಮಾಡಿದ ಕೆಲಸವೇನು?

milkha
Published on

ನವದೆಹಲಿ: ಫ್ಲೈಯಿಂಗ್ ಸಿಖ್ ಎಂದೇ ಪ್ರಖ್ಯಾತಿ ಪಡೆದಿದ್ದ ಓಟಗಾರ ಮಿಲ್ಖಾ ಸಿಂಗ್ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಅಷ್ಟಕ್ಕೂ ಅವರಿಗೆ ಈ ಫ್ಲೈಯಿಂಗ್ ಸಿಖ್ ಎನ್ನುವ ಹೆಸರು ಬಂದಿದ್ದು ಹೇಗೆ? ಪಾಕಿಸ್ತಾನದ ಅಧ್ಯಕ್ಷರನ್ನು ಅವರು ಮೋಡಿ ಮಾಡಿದ್ದು ಹೇಗೆ ಎನ್ನುವ ಸ್ಟೋರಿ ಇಲ್ಲಿದೆ.


ಅದು 1960ರ ಸಮಯ. ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಅಥ್ಲೀಟ್ ಸ್ಪರ್ಧೆ ನಡೆಯುತ್ತಿತ್ತು. ಮಿಲ್ಖಾ ಸಿಂಗ್ ಅವರನ್ನು ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ಆದರೆ ಅದಾಗಲೇ ಪಾಕ್​ ಮತ್ತು ಭಾರತ ವಿಭಜನೆಯಿಂದಾಗಿ ನೋವಿನಲ್ಲಿದ್ದ ಮಿಲ್ಖಾ ಸಿಂಗ್ ಪಾಕಿಸ್ತಾನಕ್ಕೆ ಹೋಗುವುದಕ್ಕೆ ಹಿಂದೇಟು ಹಾಕಿದ್ದರು. ಆದರೆ ಆಗಿನ ಪ್ರಧಾನಿ ನೆಹರು ಅವರು ಮಿಲ್ಖಾ ಸಿಂಗ್ ಅವರೊಂದಿಗೆ ಮಾತನಾಡಿ ಪಾಕ್​ಗೆ ತೆರಳಲು ಒಪ್ಪಿಸಿದ್ದರು.


ಆ ಸಮಯದಲ್ಲಿ ಪಾಕಿಸ್ತಾನದ ಅತ್ಯಂತ ವೇಗದ ಓಟಗಾರ ಅಬ್ದುಲ್ ಖಲೀಕ್ ಆಗಿದ್ದರು. ಆಟ ಶುರುವಾದಾಗ ಎಲ್ಲರೂ ಅಬ್ದುಲ್ ಅವರ ಹೆಸರನ್ನೇ ಕೂಗಲಾರಂಭಿಸಿದ್ದರು. ಆದರೆ ಮಿಲ್ಖಾ ಸಿಂಗ್ ಅವರು ಅಬ್ದುಲ್ ಅವರನ್ನು ಹಿಂದಿಕ್ಕಿ ಜಯ ಸಾಧಿಸಿದ್ದರು. ಆಗ ಪಾಕ್​ ಅಧ್ಯಕ್ಷ ಮಾರ್ಷಲ್ ಅಯೂಬ್ ಖಾನ್ ಭಾರತದ ಮಿಲ್ಖಾ ಸಿಂಗ್ ಅವರಿಗೆ ಫ್ಲೈಯಿಂಗ್ ಸಿಖ್ ಎಂದು ಕರೆದರು. ಅದಾದ ನಂತರ ಅವರು ಅದೇ ಹೆಸರಲ್ಲಿ ಪ್ರಸಿದ್ಧರಾದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net