

ಚಂಡೀಗಢ: ಬ್ಲಾಕ್ ಫಂಗಸ್ ನಂತರ ಇದೀಗ ಪಂಜಾಬ್ನಲ್ಲಿ ಗ್ರೀನ್ ಫಂಗಸ್ ಕೂಡ ದೃಢವಾಗಿದೆ. ಕರೊನಾದಿಂದ ಗುಣಮುಖವಾಗಿರುವ 62 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಕಾಣಿಸಿಕೊಂಡಿದ್ದು, ಆತನ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಲಾಗಿದೆ.
ಅಮೃತಸರ ಮೂಲದ ವ್ಯಕ್ತಿ ಇತ್ತೀಚೆಗೆ ಕರೊನಾದಿಂದ ಗುಣಮುಖರಾಗಿದ್ದರು. ಮತ್ತೆ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇಕ್ರೆಡ್ ಹಾರ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪರೀಕ್ಷೆ ಮಾಡಿದಾಗ, ಗ್ರೀನ್ ಫಂಗಸ್ ಇರುವುದು ಶನಿವಾರ ದೃಢವಾಗಿದೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಿಂದೆ ಗ್ರೀನ್ ಫಂಗಸ್ ಪ್ರಕರಣವೊಂದು ರಾಜ್ಯದಲ್ಲಿ ಪತ್ತೆಯಾಗಿತ್ತು. ಆದರೆ ಅದು ದೃಢವಾಗಿರಲಿಲ್ಲ. ಇದೀಗ ಮೊದಲನೇ ಪ್ರಕರಣ ದೃಢವಾಗಿದೆ. ಬ್ಲಾಕ್ ಫಂಗಸ್ನ ಸಮಸ್ಯೆ ಬಗರಹರಿಯುವ ಮೊದಲೇ ಗ್ರೀನ್ ಫಂಗಸ್ ಬಂದಿರುವುದು ಅಘಾತಕಾರಿಯಾಗಿದೆ ಎಂದು ಜಲಂಧರ್ ಸಿವಿಲ್ ಆಸ್ಪತ್ರೆಯ ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಪರಮವೀರ್ ಸಿಂಗ್ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)