

ನವದೆಹಲಿ: ಯುರೋಪ್ನ ಹೃದಯವಾಗಿರುವ ಸ್ವೀಡನ್ ದೇಶದಲ್ಲಿ ಇದೀಗ ಭಾರತೀಯರ ಸಂಖ್ಯೆ ದಿನೇ ದಿನೇ ಕ್ಷಿಣಿಸುತ್ತಿದ್ದು, ಕೆಲಸದ ನಿಮಿತ್ತ ಹಾಗೂ ಇತರೆ ಕಾರಣಗಳಿಂದ ವಲಸೆ ಬಂದ ಭಾರತೀಯರು ಸದ್ಯ ಸ್ವೀಡನ್ ತೊರೆಯುವಲ್ಲಿ ದಾಪುಗಾಲು ಇಟ್ಟಿದ್ದಾರೆ. ಈ ದಿಢೀರ್ ಪ್ರವೃತ್ತಿಯ ಹಿಂದಿರುವ ಅಸಲಿ ಕಾರಣ ಏನು ಎಂಬುದು ಯಾರಿಗೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ವರದಿಗಳ ಪ್ರಕಾರ, ಈ ವರ್ಷದ ಜನವರಿ ಮತ್ತು ಜೂನ್ 2024ರ ನಡುವೆ ಸ್ವೀಡನ್ ತೊರೆದ ಭಾರತೀಯ ವಲಸಿಗರಲ್ಲಿ ಶೇ. 171ರಷ್ಟು ಹೆಚ್ಚಳ ಕಂಡುಬಂದಿದೆ. ಅಂದರೆ 2,837 ಮಂದಿ ಹಸಿರುಮಯ ದೇಶದಿಂದ ಎಕ್ಸಿಟ್ ಪಡೆದಿದ್ದಾರೆ. ಇದು ವಲಸೆ ಬರುವ ಜನರ ಸಂಖ್ಯೆಯಲ್ಲಿ ದೊಡ್ಡ ಬದಲಾವಣೆಯನ್ನೇ ತಂದಿದ್ದು, 1998ರಿಂದ ಸ್ವೀಡನ್‌ನಿಂದ ಅತಿ ಹೆಚ್ಚು ಭಾರತೀಯರ ವಲಸೆ ಇದಾಗಿದೆ.
ಇದನ್ನೂ ಓದಿ: ಹೊಸ ಆಲೋಚನೆಗಳಿಂದ ಮಹಿಳಾ ಸಬಲೀಕರಣ
ಐದನೇ ಅತಿದೊಡ್ಡ ಯುರೋಪಿಯನ್ ದೇಶದಲ್ಲಿ ಈ ಮಹತ್ವದ ಬೆಳವಣಿಗೆ ಅನೇಕರಲ್ಲಿ ಭಾರೀ ಅಚ್ಚರಿ ಮೂಡಿಸಿದ್ದೇ ಆದರೂ ಭಾರತೀಯ ವಲಸಿಗರಲ್ಲಿ ಇಂತಹ ಮನಸ್ಥಿತಿ ಮೂಡಲು ಅಸಲಿ ಕಾರಣವೇನು ಎಂಬ ಪ್ರಶ್ನೆಗಳೇ ಕಳೆದ ಹಲವು ದಿನಗಳಿಂದ ತೀವ್ರ ಚರ್ಚೆಯಾಗುತ್ತಿದೆ. ಆದ್ರೆ, ಈ ಕುರಿತಂತೆ ಇವರೆಗು ಯಾವುದೇ ರೀತಿಯಲ್ಲಿಯೂ ಉತ್ತರ ಲಭಿಸಿರಲಿಲ್ಲ. ಸುಂದರ ಭೂದೃಶ್ಯಗಳು, ವಿಶಿಷ್ಟ ಸಂಸ್ಕೃತಿ ಮತ್ತು ಹೊಸ ಅನುಭವಗಳ ಹೊರತಾಗಿಯೂ ವಲಸಿಗರ ಸಂಖ್ಯೆಯಲ್ಲಿ ದಿಢೀರ್ ಕುಸಿತದ ಬಗ್ಗೆ ಸ್ವೀಡನ್‌ನಲ್ಲಿ ನೆಲೆಸಿರುವ ಸಾಫ್ಟವೇರ್ ಇಂಜಿನಿಯರ್ ಅಂಕುರ್ ತ್ಯಾಗಿ ಎಳೆ ಎಳೆಯಾಗಿ ವಿವರಿಸಿದ್ದಾರೆ.
ಭಾರತೀಯರು ಏಕೆ ಸ್ವೀಡನ್ ಬಿಟ್ಟೋಗಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿದ್ದಾರೆ ಎಂಬುದರ ಹಿಂದಿರುವ ಅಸಲಿ ಕಾರಣವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಅಂಕುರ್, "ಇದಕ್ಕೆ ಪ್ರಮುಖ ಕಾರಣ ಭಾರತದಲ್ಲಿ ವೃತ್ತಿಪರ ಬೆಳವಣಿಗೆ. ಅಲ್ಲಿನ ಆರ್ಥಿಕತೆಯು ಪ್ರವರ್ಧಮಾನಕ್ಕೆ ಬರುವುದರೊಂದಿಗೆ, ಹೆಚ್ಚು ನುರಿತ ವೃತ್ತಿಪರರು ಈಗ ಸ್ಪರ್ಧಾತ್ಮಕ ಸಂಬಳ ಮತ್ತು ಉತ್ತೇಜಕ ವೃತ್ತಿ ಅವಕಾಶಗಳು ಲಭ್ಯವಾಗುತ್ತಿದೆ. ಇವುಗಳು ಭಾರತೀಯರನ್ನು ತಮ್ಮ ತವರಿಗೆ ಹಿಂತಿರುಗಲು ಆಕರ್ಷಿಸುತ್ತಿವೆ. ಇದಕ್ಕಿಂತ ಮುಖ್ಯವಾಗಿ ಇಲ್ಲಿನ ಜನರೊಂದಿಗೆ ಸಂಪರ್ಕ ಮಾಡುವುದು ಅವರಿಗೆ ಕಷ್ಟವಾಗುತ್ತಿದೆ. ನಿಕಟ ಸ್ನೇಹಿತರ ಕೊರತೆ ಕೂಡ ಈ ವಿಷಯದಲ್ಲಿ ದೊಡ್ಡ ಪಾತ್ರವನ್ನೇ ವಹಿಸುತ್ತದೆ" ಎಂದು ತ್ಯಾಗಿ ಹೇಳಿದರು.
ಇದನ್ನೂ ಓದಿ: ಸೇವಾ ಮನೋಭಾವದ ವೈದ್ಯರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ
"ಈ ದೇಶದ ಸಾಂಸ್ಕೃತಿಕ ಮತ್ತು ಭಾಷೆಯ ಅಡೆತಡೆಗಳಿಂದಾಗಿ ಸ್ವೀಡನ್‌ನಲ್ಲಿ ನಿಕಟ ಸಂಪರ್ಕಗಳನ್ನು ರೂಪಿಸಲು ಅನೇಕ ಭಾರತೀಯರು ಹೆಣಗಾಡುತ್ತಿದ್ದಾರೆ. ತಮ್ಮ ನೆಲದಲ್ಲಿದ್ದ ಆಳವಾದ ಸ್ನೇಹ ಬಂಧಗಳನ್ನು ಇಲ್ಲಿ ಅವರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಉದ್ಯೋಗ ಅರಸಿ ವಲಸೆ ಬರುವ ಅದೆಷ್ಟೋ ಮಂದಿ ಕೆಲಸದಿಂದ ವಜಾಗೊಳಿಸುವಿಕೆ, ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವ ಕಾರಣ, ದಂಪತಿಗಳ ವರ್ಗಾವಣೆ ಹೀಗೆ ನಾನಾ ಕಾರಣಗಳಿಗಾಗಿ ಬಿಟ್ಟು ಹೋಗುತ್ತಿದ್ದಾರೆ. ಅರ್ಹತೆಗಳು ಮತ್ತು ಕೆಲಸದ ಅನುಭವವನ್ನು ಹೊಂದಿದ್ದರೂ ಸಹ ಇಲ್ಲಿನ ಸ್ವೀಡಿಷ್ ಭಾಷಾ ಕೌಶಲ್ಯದ ಕೊರತೆಯಿಂದಾಗಿಯೂ ದೇಶ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ತ್ಯಾಗಿ ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ,(ಏಜೆನ್ಸೀಸ್).