ವೈದ್ಯರ ಕೈಬರಹ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ ಯಾಕೆ ಗೊತ್ತಾ?; ಕಾರಣ ಹೀಗಿದೆ

Doctor
Published on

ನವದೆಹಲಿ: ನಾವುಗಳು ಸಾಮಾನ್ಯವಾಗಿ ಬೇರಯವರ ಕೈಬರಹವನ್ನು ಆರಾಮಾಗಿ ಓದುತ್ತೇವೆ ಆದರೆ, ವೈದ್ಯರ ಕೈಬರಹವನ್ನು ಮೆಡಿಕಲ್ ಸ್ಟೋರ್​​​ನವರು ಹೊರತುಪಡಿಸಿದರೆ ಯಾರಿಂದಲೂ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿರುವುದಿಲ್ಲ. ಆದರೆ, ನಾವು ಯೋಚನೆ ಮಾಡಬೇಕಾದ ಒಂದು ವಿಚಾರ ಏನಂದರೆ ವೈದ್ಯರ ಕೈಬರಹ ಯಾಕಷ್ಟು ವಿಚಿತ್ರವಾಗಿರುತ್ತದೆ ಎಂಬ ವಿಚಾರವನ್ನು ತಿಳಿಯೋಣ ಬನ್ನಿ.

ವೈದ್ಯರ ಕೈಬರಹ ವಿಚಿತ್ರವಾಗಿರಲು ಮೂರು ಕಾರಣಗಳಿವೆ ಅದೇನೆಂದರೆ ವೈದ್ಯಕೀಯ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು 3 ಘಂಟೆ ಅವಧಿಯಲ್ಲಿ 150 ಅಂಕಗಳನ್ನು ಉತ್ತರಿಸಬೇಕಾಗುತ್ತದೆ. ಹೀಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆಯಬೇಕಾದರೆ ತುಂಬಾ ವೇಗವಾಗಿ ಅವರು ಬರೆಯಬೇಕಾಗುತ್ತೆ. ಇದು ಕೂಡಾ ವೈದ್ಯರ ಕೈ ಬರಹ ಅಷ್ಟು ಸುಲಭವಾಗಿ ಅರ್ಥವಾಗದಿರಲು ಒಂದು ಕಾರಣವಾಗಿದೆ.

ಎರಡನೆಯ ಕಾರಣವೇನೆಂದರೆ ಕಡಿಮೆ ಸಮಯದಲ್ಲಿ ಹೆಚ್ಚು ಪೇಶೆಂಟ್​​​ಗಳನ್ನು ಡಾಕ್ಟರ್ಸ್ ಚೆಕ್ ಮಾಡಬೇಕಾಗುತ್ತದೆ. ಅದಕ್ಕಾಗಿ ಅವರು ವೇಗವಾಗಿ ಚೀಟಿಗಳನ್ನು ಬರೆಯುತ್ತಾರೆ. ಅದು ನಮಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಮೂರನೆಯ ಕಾರಣವನ್ನು ನೋಡುವುದಾದರೆ, ವೈದ್ಯರ ಕೈಬರಹ  ಕೇವಲ ಮೆಡಿಕಲ್ ಸ್ಟೋರ್ ಅವರಿಗೆ ಮಾತ್ರ ಅರ್ಥವಾಗುತ್ತದೆ, ಸಾಮಾನ್ಯ ಜನರಿಗೆ ಅರ್ಥವಾದರೆ ಅವರು ವೈದ್ಯರ ಬಳಿ ಹೋಗದೇ ತಮಗೆ ಬೇಕಾದ ಮಾತ್ರೆಗಳನ್ನು ತೆಗೆದುಕೊಂಡು, ತೊಂದರೆಗೆ ಸಿಲುಕುವಂತಹ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿದೆ.

ಈ ಕುರಿತು ವಿವರವಾದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಈವರೆಗೆ 4 ಮಿಲಿಯನ್​ಗಿಂತಲೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಈ ರೀತಿಯ ಉಪಯೋಗಕರಿ ವಿಚಾರಗಳನ್ನು ಹೆಚ್ಚು ಹಂಚಿಕೊಳ್ಳುವಂತೆ ಜನರು ಕಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net