ಫಿನಾಲೆ ಹತ್ತಿರವಾದರೂ ಬದಲಾಗ್ತಿಲ್ಲ ವಿಜೇತರ ಹೆಸರು! ಈಗಲೂ ವಿನ್ನರ್​ ಇವರೇ ಅಂತಿದ್ದಾರೆ ವೀಕ್ಷಕರು

ವಿಜಯವಾಣಿ - 2024-01-21T173722.212
Published on

ಬೆಂಗಳೂರು: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಎಂದು ಹೇಳಲಾದ ಬಿಗ್ ಬಾಸ್​ ಸೀನಸ್​ 10ರ ಟಾಪ್ ಆರು ಸ್ಪರ್ಧಿಗಳು ಇದೀಗ ಯಶಸ್ವಿ 16 ವಾರಗಳನ್ನು ಪೂರೈಸಿ ಫಿನಾಲೆಯತ್ತ ಸಾಗುತ್ತಿದ್ದಾರೆ. ಈ ಮಧ್ಯೆ ತಮ್ಮ ಗೆಲುವಿಗಾಗಿ ಇತರೆ ಸದಸ್ಯರೊಂದಿಗೆ ಭಾರೀ ಹಣಾಹಣಿ ನಡೆಸುತ್ತಿರುವ ಕಂಟೆಸ್ಟೆಂಟ್​ಗಳ ಪೈಕಿ ಎಲ್ಲರೂ ಕೂಡ ಟ್ರೋಫಿ ಗೆಲ್ಲಲು ಅರ್ಹರಾಗಿದ್ದಾರೆ ಎಂಬುದು ಸದ್ಯ ಹೊರಗಿನ ಮಾತಾಗಿದೆ.

ಸ್ನೇಹ, ಪ್ರೀತಿ, ಜಗಳ, ಮನಸ್ತಾಪಗಳ ನಡುವೆ 16 ವಾರಗಳನ್ನು ಯಶಸ್ವಿಯಾಗಿ ಕಳೆದಿರುವ ಆರು ಸದಸ್ಯರು ಮಾತ್ರ ತಾವು ಸುದೀಪ್ ಅವರ ಪಕ್ಕ ನಿಲ್ಲಲೇಬೇಕು, ನಿಲ್ಲುವುದರ ಜತೆಗೆ ಸೀಸನ್​ ಟ್ರೋಫಿಗೆ ಮುತ್ತಿಕ್ಕಲೇಬೇಕು ಎಂದು ಕನಸು ಕಾಣುತ್ತಿದ್ದಾರೆ. ಇದೆಲ್ಲದರ ನಡುವೆ ಸದ್ಯ ಸೀಸನ್​ 10ರ ಪಟ್ಟ ಯಾರಿಗೆ ಎಂಬ ಲೆಕ್ಕಾಚಾರಗಳು ಸದ್ಯ ಬಿರುಸಿನಿಂದ ಸಾಗುತ್ತಿದ್ದು, ಪ್ರಥಮ ಬಾರಿಗೆ ವೀಕ್ಷಕರೇ ಭಾರೀ ಗೊಂದಲಕ್ಕೆ ತುತ್ತಾಗಿರುವುದು ಕಂಡುಬಂದಿದೆ.

ಕಾರಣ, ಪ್ರತಿ ಬಿಗ್ ಬಾಸ್​ ಸೀಸನ್​ ಅಂತಿಮ ಹಂತ ತಲುಪುವಷ್ಟರಲ್ಲಿ ವೀಕ್ಷಕರು ಇವರು ಖಂಡಿತ ಗೆಲ್ಲುತ್ತಾರೆ. ಇವರಿಗೆ ಬಿಗ್ ಬಾಸ್​ ಟ್ರೋಫಿ ಫಿಕ್ಸ್​ ಎಂದು ತಮ್ಮಲ್ಲೇ ನಿರ್ಧರಿಸುತ್ತಾರೆ. ಆದ್ರೆ, ಇದೇ ಮೊದಲ ಬಾರಿಗೆ ಯಾರು ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ ಎಂಬುದನ್ನು ಊಹಿಸುವುದು ಕಷ್ಟಕರವಾಗಿದೆ.

ಕಳೆದ ವಾರ ಫಿನಾಲೆ ವಾರ ತಲುಪಲು ಕೇವಲ ಐವರಿಗೆ ಮಾತ್ರ ಸ್ಥಾನ ಎಂದು ಹೇಳಲಾಗಿತ್ತು. ಈ ವೇಳೆ ಎಲ್ಲರ ನಿರೀಕ್ಷೆ ತಲೆಕೆಳಗಾಗಿದ್ದು ಕೇವಲ ನಮ್ರತಾ ಅವರ ಎಲಿಮಿನೇಷನ್​! ಫಿನಾಲೆ ಓಟದಿಂದ ನಮ್ರತಾ ಹೊರಬೀಳುತ್ತಿದ್ದಂತೆ ಕಾರ್ತಿಕ್​ ಸೇವ್ ಆಗಿ ಫೈನಲ್ ಹಣಾಹಣಿ ನಡೆಸಲು ಮತ್ತೊಂದು ಅವಕಾಶ ಗಿಟ್ಟಿಸಿಕೊಂಡರು. ಇದು ವೀಕ್ಷಕರಿಗೆ ಭಾರೀ ಶಾಕ್ ನೀಡಿತು. ಕಾರಣ ಇಷ್ಟು ಸೀಸನ್​ನಲ್ಲಿ ಫಿನಾಲೆ ವಾರದಲ್ಲಿ ಕೇವಲ ಐವರು ಮಾತ್ರ ಸೆಣಸಾಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಆರು ಮಂದಿ ಎಂಟ್ರಿ ಕೊಟ್ಟಿರುವುದು.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ವಾರದಿಂದಲೂ ಫಿನಾಲೆಯಲ್ಲಿ ಕಾರ್ತಿಕ್​, ಸಂಗೀತಾ ಮತ್ತು ಪ್ರತಾಪ್ ಇರಲಿದ್ದಾರೆ ಎಂಬ ಊಹೆಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇದೆಲ್ಲದರ ನಡುವೆ ಸುದೀಪ್ ಅವರ ಅಕ್ಕ-ಪಕ್ಕ ಕಾರ್ತಿಕ್ ಮತ್ತು ಪ್ರತಾಪ್ ಕಾಣಿಸಿಕೊಳ್ಳಲಿದ್ದು, ವಿಜೇತರಾಗಿ ಪ್ರತಾಪ್ ಹೊರಹೊಮ್ಮಲಿದ್ದಾರೆ ಎಂದು ವ್ಯಾಪಕವಾಗಿ ಅಭಿಪ್ರಾಯಿಸುತ್ತಿದ್ದಾರೆ. ನೆಟ್ಟಿಗರ ಗೆಸ್​ಗಳು ನಿಜವಾಗಲಿದೆಯೇ? ಅಸಲಿಗೆ ಸೀಸನ್​ 10ರ ವಿನ್ನರ್ ಯಾರಾಗಲಿದ್ದಾರೆ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net