More

    ಅಯೋಧ್ಯೆ ರಾಮ ಮಂದಿರಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದವರು ದೊಡ್ಡ ಉದ್ಯಮಿ ಅಲ್ಲವೇ ಅಲ್ಲ, ಮತ್ಯಾರು?

    ಅಯೋಧ್ಯೆ: ಭಾರತದಲ್ಲಿ ಮಾತ್ರವಲ್ಲದೆ, ಪ್ರಪಂಚದಾದ್ಯಂತ ರಾಮ ಭಕ್ತರು ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕಾಗಿ ದೇಣಿಗೆ ನೀಡಿದ್ದಾರೆ. ಆದರೆ ಗುಜರಾತ್‌ನ ಸೂರತ್‌ನ ವ್ಯಕ್ತಿಯೊಬ್ಬರು ಗರಿಷ್ಠ ದೇಣಿಗೆ ನೀಡಿದ್ದಾರೆ. ವಿಶೇಷವೆಂದರೆ ಅವರು ರಿಲಯನ್ಸ್ ಗ್ರೂಪ್‌ನ ಮುಖೇಶ್ ಅಂಬಾನಿ, ಅದಾನಿ ಗ್ರೂಪ್‌ನ ಗೌತಮ್ ಅದಾನಿ ಅಥವಾ ಟಾಟಾ ಗ್ರೂಪ್‌ನ ರತನ್ ಟಾಟಾ ಅವರಂತೆ ದೊಡ್ಡ ಉದ್ಯಮಿ ಅಲ್ಲ, ಆದರೆ ಅವರು ರಾಮ ಲಲ್ಲಾಗಾಗಿ ಉದಾರವಾಗಿ ದೇಣಿಗೆ ನೀಡಿದ್ದಾರೆ. ಹಾಗಾದರೆ ಬನ್ನಿ, ಅವರ ಬಗ್ಗೆ ತಿಳಿದುಕೊಳ್ಳೋಣ..

    ಯಾರು ಈ ದಿಲೀಪ್ ಕುಮಾರ್? 
    ದಿಲೀಪ್ ಕುಮಾರ್ ವಿ ಲಖಿ ಸೂರತ್‌ನ ವಜ್ರದ ವ್ಯಾಪಾರಿ. ವರದಿಯ ಪ್ರಕಾರ, ಅವರು ರಾಮಮಂದಿರ ನಿರ್ಮಾಣ ಟ್ರಸ್ಟ್‌ಗೆ 101 ಕೆಜಿ ಚಿನ್ನವನ್ನು ದಾನ ಮಾಡಿದ್ದಾರೆ. ಇದನ್ನು ದೇವಾಲಯದ ಗರ್ಭಗುಡಿಯ ಚಿನ್ನದ ಲೇಪಿತ ಬಾಗಿಲುಗಳು, ಕಂಬಗಳು ಮತ್ತು ಚಿನ್ನದ ಲೇಪಿತ ರಚನೆಗಳನ್ನು ಮಾಡಲು ಬಳಸಲಾಗಿದೆ. ದೇವರಿಗೆ ನೀಡಿದ ದೇಣಿಗೆಗಳ ಮೌಲ್ಯವನ್ನು ಅಂದಾಜು ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತದೆ. ಆದರೆ ವಜ್ರದ ವ್ಯಾಪಾರಿ ನೀಡಿದ ಚಿನ್ನದ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 70 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ರಾಮ ಮಂದಿರಕ್ಕೆ ಒಟ್ಟು 3200 ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ.

    ದೊಡ್ಡ ಮೊತ್ತದ ದೇಣಿಗೆ ನೀಡಿದ ಮೊರಾರಿ ಬಾಪು 
    ರಾಮಮಂದಿರ ನಿರ್ಮಾಣಕ್ಕೆ ಮೊರಾರಿ ಬಾಪು 18 ಕೋಟಿ, ಅಂಬಾನಿ 2.51 ಕೋಟಿ ದೇಣಿಗೆ ನೀಡಿದ್ದಾರೆ. ಸಂತರಿಂದ ಹಿಡಿದು ದೊಡ್ಡ ಉದ್ಯಮಿಗಳು, ಬಾಲಿವುಡ್ ತಾರೆಯರು ಮುಂತಾದವರು ದೇಣಿಗೆ ನೀಡಿದ್ದಾರೆ. ಕಥೆಗಾರ ಹಾಗೂ ಆಧ್ಯಾತ್ಮಿಕ ಗುರು ಮೊರಾರಿ ಬಾಪು ರಾಮಮಂದಿರ ನಿರ್ಮಾಣಕ್ಕೆ 18.6 ಕೋಟಿ ರೂ. ದೇಣಿಗೆ ನೀಡಿದ್ದು, ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್ ಪ್ರಕಾರ, ಮೊರಾರಿ ಬಾಪು ಇಷ್ಟು ದೊಡ್ಡ ಮೊತ್ತವನ್ನು ನೀಡಿದ ಮೊದಲ ವ್ಯಕ್ತಿ.

    ಅಂಬಾನಿ ಸಮೂಹವು ರಾಮಮಂದಿರ ಟ್ರಸ್ಟ್‌ಗೆ 2.51 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಡಾಬರ್ ಇಂಡಿಯಾ ಜನವರಿ 17 ರಿಂದ ಜನವರಿ 31 ರವರೆಗೆ ತನ್ನ ಉತ್ಪನ್ನಗಳ ಮಾರಾಟದಿಂದ ಬರುವ ಲಾಭದ ಒಂದು ಭಾಗವನ್ನು ಶ್ರೀ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡುವುದಾಗಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಘೋಷಿಸಿದೆ. 

    ಆರೋಗ್ಯ ವಿಮೆ ನಿಯಮದಲ್ಲಿ ಬದಲಾವಣೆ: ಇನ್ನು ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಲಭ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts