

ಬೆಂಗಳೂರು: ತೆಲುಗು ಚಿತ್ರರಂಗದ ಸೆನ್ಸೇಷನ್ ನಟ ವಿಜಯ್ ದೇವರಕೊಂಡ ಅಭಿನಯಿಸಲಿರುವ ಇನ್ನು ಅಧಿಕೃತ ಟೈಟಲ್ ಇಡದ 'ವಿಡಿ 12' ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಗಳು ಟಾಲಿವುಡ್ನಲ್ಲಿ ಚರ್ಚೆಯಾಗುತ್ತಿದ್ದು, ಸಿನಿಮಾಗೆ ಯಾವ ಶೀರ್ಷಿಕೆ ಫೈನಲ್ ಆಗಲಿದೆ ಎಂಬ ಕುತೂಹಲ ಸದ್ಯ ವಿಜಯ್ ಅಭಿಮಾನಿಗಳಲ್ಲಿ ಮೂಡಿದೆ. ಈ ಮಧ್ಯೆ ಮತ್ತೊಂದು ಸುದ್ದಿಯೊಂದು ಹೊರಬಿದ್ದಿದ್ದು, ಚಿತ್ರಕ್ಕೆ ಹೊಸ ನಾಯಕಿಯ ಹುಡಕಾಟ ನಡೆಯುತ್ತಿದೆ.
'ಜೆರ್ಸಿ' ಖ್ಯಾತಿಯ ಗೌತಮ್ ತಿನ್ನನೂರಿ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಸದ್ಯ ನಾಯಕಿಯ ಹುಡುಕಾಟ ನಡೆಯುತ್ತಿದೆ. ಈ ಹಿಂದೆ ವಿಜಯ್ ಜತೆಗೆ ಅಭಿನಯಿಸಲು ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಗಿತ್ತು. ಆದ್ರೆ, ಇದೀಗ ಚಿತ್ರದಿಂದ ಶ್ರೀಲೀಲಾ ಹೊರಗುಳಿದ ಬೆನ್ನಲ್ಲೇ ಚಿತ್ರತಂಡ ಹೊಸ ನಾಯಕಿಗಾಗಿ ಹುಡಕಾಡುತ್ತಿದೆ. ಈ ಸಾಲಿನಲ್ಲಿ 'ಅನಿಮಲ್' ಮತ್ತು 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ನಟಿಯರು ಮುಂಚೂಣಿಯಲ್ಲಿದ್ದಾರೆ.
'ವಿಡಿ12' ಚಿತ್ರದಲ್ಲಿ ಗೂಢಚಾರಿ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ವಿಜಯ್ ದೇವರಕೊಂಡಗೆ ಯಾರು ನಾಯಕಿಯಾಗಿ ಆಯ್ಕೆಯಾಗುತ್ತಾರೆ ಎಂಬುದೇ ಸದ್ಯದ ಪ್ರಶ್ನೆ. ವರದಿಯ ಪ್ರಕಾರ, ಶ್ರೀಲೀಲಾ ಈ ಚಿತ್ರದಿಂದ ಹೊರಗುಳಿದ ಕಾರಣ ಅವರ ಸ್ಥಾನಕ್ಕೆ ತೃಪ್ತಿ ದಿಮ್ರಿ ಅಥವಾ ಸ್ಯಾಂಡಲ್ವುಡ್ ನಟಿ ರುಕ್ಮಿಣಿ ವಸಂತ್ ಕರೆತರಲು ತಯಾರಕರು ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತಂತೆ ಪ್ರೊಡಕ್ಷನ್ ಹೌಸ್‌ನಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಘೋಷಣೆಯಾಗಿಲ್ಲ. ಆದ್ರೆ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತವಿರಲಿದೆ,(ಏಜೆನ್ಸೀಸ್).