More

    ಜ್ಞಾನಾರ್ಜನೆಯೊಂದಿಗೆ ಮಕ್ಕಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

    ನುಗ್ಗೇಹಳ್ಳಿ: ಜ್ಞಾನಾರ್ಜನೆಯೊಂದಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು ಎಂದು ಇಲ್ಲಿನ ಪೊಲೀಸ್ ಠಾಣೆ ಪಿಎಸ್‌ಐ ಎನ್.ಜಿ.ನವೀನ್ ತಿಳಿಸಿದರು.

    ಹೋಬಳಿ ಕೇಂದ್ರದ ಪಿಎಚ್ ದೇಶಪಾಂಡೆ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಹೊಯ್ಸಳೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ. ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪಾಲಕರು ಉತ್ತೇಜನ ನೀಡಿದರೆ ಮಕ್ಕಳು ಗುರಿ ತಲುಪಲು ಸಾಧ್ಯ ಎಂದರು.

    ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕದಿಯಲಾಗದ ಒಂದು ವಿದ್ಯೆ ಎಂದರೆ ಜ್ಞಾನದ ವಿದ್ವತ್ತು. ಹಣ ಇದ್ದರೂ ಅದನ್ನು ಕದಿಯುತ್ತಾರೆ, ಆಸ್ತಿ ಮಾಡಿದ್ದಲ್ಲಿ ಕಬಳಿಸುತ್ತಾರೆ. ಆದರೆ ನಿಮ್ಮಲ್ಲಿರುವ ಜ್ಞಾನವನ್ನು ಯಾರೂ ಕದಿಯಲು ಸಾಧ್ಯವಿಲ್ಲ ಎಂದರು.

    ಬಿಆರ್‌ಸಿ ಅನಿಲ್ ಮಾತನಾಡಿ, ಗ್ರಾಮೀಣ ಮಕ್ಕಳಲ್ಲಿ ಜ್ಞಾನದ ಶಕ್ತಿ ಹೆಚ್ಚಿರುತ್ತದೆ. ಅದನ್ನು ಗುರುತಿಸಿ ಹೊರತರುವ ಶಕ್ತಿ ಶಿಕ್ಷಕರಿಗೆ ಇರುತ್ತದೆ ಎಂದು ಹೇಳಿದರು.

    ಸಮಾರಂಭದಲ್ಲಿ ಶಾಲಾ ಕಾರ್ಯದರ್ಶಿ ಶಶಿಕಲಾ ಮಂಜುನಾಥ್, ಇಸಿಒ ನಿತ್ಯಾನಂದ, ಸಿಆರ್‌ಪಿಗಳಾದ ಮಂಜೇಗೌಡ, ಶ್ರೀಕಾಂತ್, ಕನಕಲತಾ ರವಿ, ಉಷಾ, ಚಿರಾಗ್, ಚಿನ್ಮಯಿ, ಮುಖ್ಯ ಶಿಕ್ಷಕ ಜೆ.ಎಲ್.ರವಿ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts