

ಆಂಧ್ರಪ್ರದೇಶ: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ನಟಿ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ಗುಂಟೂರು ಕಾರಂ' ಬಿಡುಗಡೆಗೊಂಡು ಇದೀಗ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಆರಂಭವನ್ನು ಕಂಡಿದೆ. ಈ ಚಿತ್ರದ ಜತೆಗೆ ಸಖತ್ ಪೈಪೋಟಿ ಕೊಡಲು ಪ್ಯಾನ್ ಇಂಡಿಯಾ ರಿಲೀಸ್ ಪಡೆದ ತೇಜ ಸಜ್ಜ ನಟನೆಯ 'ಹನು-ಮಾನ್' ಕೂಡ ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಸಾಲಿಡ್ ಕಿಕ್ ಸ್ಟಾರ್ಟ್ ಪಡೆಯುವ ಮುಖೇನ ಚಿತ್ರರಸಿಕರ ಹುಬ್ಬೇರುವಂತೆ ಮಾಡಿದೆ.
ಒಂದೆಡೆ 'ಹನು-ಮಾನ್' ಪ್ಯಾನ್ ಇಂಡಿಯಾ ಚಿತ್ರವಾಗಿ ಹೊರಹೊಮ್ಮಿದರೆ ಮತ್ತೊಂದೆಡೆ ಮಹೇಶ್ ಬಾಬು ಸಿನಿಮಾ ಕೇವಲ ತೆಲುಗು ಭಾಷೆಯಲ್ಲಿ ಮಾತ್ರ ರಿಲೀಸ್ ಕಂಡಿದೆ. ಇಷ್ಟಾದರೂ ಕೂಡ ಚಿತ್ರವು ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸುವುದರ ಜತೆಗೆ ಬಾಕ್ಸ್ ಆಫೀಸ್ನಲ್ಲಿ ಮಿಂಚಿನ ಓಟದತ್ತ ಎದುರುನೋಡುತ್ತಿದೆ. ಆಕರ್ಷಕ ವಿಎಫ್ಎಕ್ಸ್ ಕೆಲಸಗಳಿಂದಲೇ ಹೆಚ್ಚು ಗಮನಸೆಳೆಯುತ್ತಿರುವ ಹನು-ಮಾನ್ ಸದ್ಯ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಜನವರಿ 19ರ ಬಾಕ್ಸ್ ಆಫೀಸ್ ವಿವರ: 1360 ಶೋಗಳನ್ನು ಪಡೆದ 'ಗುಂಟೂರು ಕಾರಂ' 1,62,853 ಟಿಕೆಟ್‌ಗಳ ಸೇಲ್ ಮೂಲಕ 34.40% ಆಕ್ಯುಪೆನ್ಸಿ ಗಳಿಸಿದೆ.
ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ವಿವರ:
ಪಿವಿಆರ್ (PVR) 6,915 - 0.17 ಕೋಟಿ ರೂ.
ಐನಾಕ್ಸ್ (INOX) 3,758 - 0.08 ಕೋಟಿ ರೂ.
ಸಿನೆಪೊಲಿಸ್ : 1,727 - 0.04 ಕೋಟಿ ರೂ. ಒಟ್ಟು ಎಲ್ಲಾ ಚಿತ್ರಮಂದಿರಗಳಿಂದ 2.54 ಕೋಟಿ ರೂ. ಲಭಿಸಿದೆ.
ಇನ್ನು 5900 ಶೋಗಳನ್ನು ಪಡೆದ 'ಹನು-ಮಾನ್' 5,57,701 ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ 28.66% ಆಕ್ಯುಪೆನ್ಸಿ ಪಡೆದುಕೊಂಡಿದೆ.
ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ವಿವರ:
ಪಿವಿಆರ್ (PVR): 47,535 - 1.26 ಕೋಟಿ ರೂ.
ಐನಾಕ್ಸ್ (INOX): 33,064 - 0.75 ಕೋಟಿ ರೂ.
ಸಿನೆಪೊಲಿಸ್: 20,697 - 0.54 ಕೋಟಿ ರೂ. ಎಲ್ಲಾ ಚಿತ್ರಮಂದಿರಗಳಿಂದ ಒಟ್ಟು 9.49 ಕೋಟಿ ರೂ. ಕಲೆಕ್ಷನ್ ಲಭಿಸಿದೆ,(ಏಜೆನ್ಸೀಸ್).