

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಯು ಆಘಾತಕಾರಿ ವರದಿಯೊಂದನ್ನು ಬಹಿರಂಗಪಡಿಸಿದ್ದು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿರುವ ಸಾಂಕ್ರಾಮಿಕ ರೋಗವು ಅನೇಕ ತೊಂದರೆಗಳಿಗೆ ಕಾರಣವಾಗಲಿದ್ದು, ಹೆರಿಗೆ ಸಮಯದಲ್ಲಿ ಮಹಿಳೆಯರು ಸಾಯುವ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಡಬ್ಲ್ಯುಎಚ್ಒ ಸಾಮಾನ್ಯ ಕಾರ್ಯದರ್ಶಿ ಟೆಡ್ರೋಸ್ ಅಧಾನಮ್ ಘೆಬ್ರೆಯೆಸಸ್ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿ ಹೆಣಗಾಡುತ್ತಿರುವವರ ಮೇಲೆ ಜಾಗತಿಕವಾಗಿ ಕಾಡುತ್ತಿರುವ ಸಾಂಕ್ರಾಮಿಕ ಪ್ರಭಾವ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: VIDEO| ರಾತ್ರಿ ತನ್ನಷ್ಟಕ್ಕೆ ತಾನೇ ವರ್ಕೌಟ್ ಮಾಡುತ್ತಿರೋ ಜಿಮ್ ಯಂತ್ರ: ನಿಗೂಢ ಭೇದಿಸಿದ ಪೊಲೀಸರು!
ಮಹಿಳೆಯರು, ಮಕ್ಕಳು ಹಾಗೂ ಹದಿಹರೆಯದವರ ಮೇಲೆ ಪರಿಣಾಮ ಹೆಚ್ಚಿಗೆ ಇರಲಿದೆ. ಮಹಾಮಾರಿ ಕರೊನಾ ಅನೇಕ ದೇಶಗಳ ಆರೋಗ್ಯ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಇದರಿಂದ ಹೆರಿಗೆ ಸಮಯದಲ್ಲಿ ಸಾವಿನ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಡಬ್ಲ್ಯುಎಚ್ಒ ಎಚ್ಚರಿಸಿದೆ.
ತಾಯಂದಿರು ತಮ್ಮ ನವಜಾತ ಶಿಶುಗಳಿಗೆ ಕರೊನಾ ವೈರಸ್ ಹರಡುವ ಅಪಾಯವನ್ನು ಡಬ್ಲ್ಯುಎಚ್ಒ ಇತ್ತೀಚೆಗಷ್ಟೇ ತನಿಖೆ ಮಾಡಿದೆ. ಸ್ತನ್ಯಪಾನದ ಮೂಲಕ ವೈರಸ್ ಹರಡುವ ಅಪಾಯಗಳನ್ನು ಅರಿತಿರುವುದಾಗಿ ಟೆಡ್ರೊಸ್ ಹೇಳಿದ್ದಾರೆ. ಅಲ್ಲದೆ, ಖಿನ್ನತೆ, ಒತ್ತಡ ಸೇರಿದಂತೆ ಮುಂತಾದ ಮಾನಸಿಕ ರೋಗಕ್ಕೆ ಒಳಗಾಗಿರುವ ಯುವ ಜನಾಂಗದ ಬಗ್ಗೆಯೂ ಡಬ್ಲ್ಯುಎಚ್ಒ ಕಳವಳ ವ್ಯಕ್ತಪಡಿಸಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಮನವಿ ಮಾಡಿದೆ. (ಏಜೆನ್ಸೀಸ್) ಇದನ್ನೂ ಓದಿ: ಅನ್ಯ ಧರ್ಮದ ಯುವಕನ ಜತೆ ನಾಪತ್ತೆಯಾಗಿದ್ದ ಹಿಂದು ಯುವತಿ ಪತ್ತೆ: ಸುಳ್ಳು ಹೇಳಿ ಸಿಕ್ಕಿಬಿದ್ದ ಆರೋಪಿ