More

    VIDEO: ವಿಶ್ವಸಂಸ್ಥೆಯಲ್ಲಿ ಭಾರತದ ಹೆಜ್ಜೆ ಗುರುತು ಹೇಗಿತ್ತೆಂಬುದನ್ನು ವಿವರಿಸಿದ್ದಾರೆ ಯುಎನ್​ ರಾಯಭಾರಿ ಟಿ.ಎಸ್.ತಿರುಮೂರ್ತಿ..

    ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತದ ಪ್ರಾತಿನಿಧ್ಯವು ಜಗತ್ತಿಗೆ ವಸುದೈವ ಕುಟುಂಬಕಂನ ಚಿಂತನೆಯನ್ನು ಅರ್ಥೈಸುವಲ್ಲಿ ನೆರವಾಗಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎನ್​. ತಿರುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಜೂನ್ 17ರಂದು ಭಾರತವು ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್​ನ ನಾನ್ ಪರ್ಮನೆಂಟ್ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಳ್ಳಲಿದೆ. 2021-22ನೇ ಸಾಲಿನ ಏಷ್ಯಾ ಪೆಸಿಫಿಕ್ ಕೆಟಗರಿಯ ನಾನ್​ ಪರ್ಮನೆಂಟ್​ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ಭಾರತ ನಾಮನಿರ್ದೇಶನ ಮಾಡಲ್ಪಟ್ಟಿದೆ. ಈ ಭಾಗದ ಚೀನಾ, ಪಾಕಿಸ್ತಾನ ಸೇರಿ 55 ರಾಷ್ಟ್ರಗಳು ಒಮ್ಮತದಿಂದ ಭಾರತದ ಹೆಸರನ್ನು ಕಳೆದ ವರ್ಷ ಜೂನ್ ತಿಂಗಳಲ್ಲಿ ಸೂಚಿಸಿವೆ. ಹೀಗಾಗಿ ಜೂನ್ 17ರಂದು ಚುನಾವಣೆ ನಡೆಯುವುದಕ್ಕೂ ಮೊದಲೇ ಭಾರತ ವಿಜಯಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅಧಿಕೃತವಾಗಿ, ಔಪಚಾರಿಕವಾಗಿ ಸೇರ್ಪಡೆಗೊಳ್ಳುವುದಷ್ಟೇ ಬಾಕಿ ಇದೆ.

    ಇದನ್ನೂ ಓದಿ: 17ರಂದು ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯತ್ವಕ್ಕೆ ಚುನಾವಣೆ

    ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರಾಯಭಾರಿ ಟಿ.ಎಸ್. ತಿರುಮೂರ್ತಿ ಅವರು ವಿಶ್ವಸಂಸ್ಥೆಯಲ್ಲಿ ಭಾರತದ ಐತಿಹಾಸಿಕ ಹೆಜ್ಜೆ ಗುರುತುಗಳನ್ನು ಅವಲೋಕಿಸಿದ್ದಾರೆ. ಅದರ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಶುಕ್ರವಾರ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿರುವ ಸಂದೇಶದ ಸಾರ ಹೀಗಿದೆ- ವಿಶ್ವಸಂಸ್ಥೆ ಸ್ಥಾಪನೆಯಾಗಿ ಈ ವರ್ಷ 75 ವರ್ಷವಾಗಿದ್ದು, ಅದರ ಆಚರಣೆ ಚಾಲ್ತಿಯಲ್ಲಿದೆ. ಭಾರತ ಮುಂದಿನ ವರ್ಷ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಹೆಜ್ಜೆ ಗುರುತುಗಳಿಗೆ ಮಹತ್ವ ಇದೆ. ವಿಶ್ವಸಂಸ್ಥೆಯ ಸಂಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಭಾರತವೂ ಒಂದು. ವಿಶ್ವಸಂಸ್ಥೆಯ ಗುರಿಗಳನ್ನು ಈಡೇರಿಸುವಲ್ಲಿ ಭಾರತವೂ ಮಹತ್ವದ ಪಾತ್ರವನ್ನು ವಹಿಸಿದೆ. ಈಗ ಭದ್ರತಾ ಸಮಿತಿಗೆ ಸೇರ್ಪಡೆಯಾಗುವ ಮೂಲಕ ವಸುದೈವ ಕುಟುಂಬಕಂ ಚಿಂತನೆಯ ಆಶಯವನ್ನು ಭಾರತ ಜಗತ್ತಿಗೆ ಅರ್ಥಮಾಡಿಸಿಕೊಡುವಲ್ಲಿ ಮಹತ್ವದ ಪಾತ್ರವಹಿಸಲಿದೆ. (ಏಜೆನ್ಸೀಸ್)

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆ ಬಾಗಿಲಿಗೆ ಕ್ವಾರಂಟೈನ್ ನೋಟಿಸ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts