ನಟಿ ಕೀರ್ತಿ ಸುರೇಶ್​​​ ಮದುವೆ ಆಗಲಿರುವ ಆಂಟೋನಿ ಥಟ್ಟಿಲ್​​​ ಯಾರು?; ಅವರು ಏನಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ... | Keerthy Suresh

Untitled design - 2024-11-20T174122.253
Published on

ಚೆನ್ನೈ: ಸೌತ್ ಸಿನಿಮಾರಂಗದಲ್ಲಿ ಪ್ರೇಕ್ಷಕರ ಮನಗೆದ್ದ ನಟಿಯರಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಚಿತ್ರರಂಗಕ್ಕೆ ಕಾಲಿಟ್ಟರು ತಮ್ಮ ನಟನಾ ಕೌಶಲದಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಕೀರ್ತಿ ಸುರೇಶ್​​​(Keerthy Suresh) ಮದುವೆಯಾಗಲಿದ್ದಾರೆ ಎಂಬ ಸುದ್ದಿ ಮುನ್ನೆಲೆಗೆ ಬಂದಿದೆ.

ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ತನ್ನ ಸ್ನೇಹಿತ ಆಂಟೋನಿ ಥಟ್ಟಿಲ್ ಅವರನ್ನು ಕೀರ್ತಿ ಸುರೇಶ್ ವಿವಾಹ ಆಗಲಿದ್ದಾರೆ. ಡಿಸೆಂಬರ್ 11-12ರಂದು ಗೋವಾದಲ್ಲಿ ಕೀರ್ತಿ ತನ್ನ ಸ್ನೇಹಿತ ಆಂಟೋನಿ ಥಟ್ಟಿಲ್ ಅವರೊಂದಿಗೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕೀರ್ತಿ ಸುರೇಶ್​​​ ಅವರಿಂದ ಯಾವುದೇ ಅಧಿಕೃತ ಘೋಷಣೆ ಈವರೆಗೂ ಬಂದಿಲ್ಲ. ಹಾಗಾದ್ರೆ ಕೀರ್ತೀ ಸುರೇಶ್​ ಮದುವೆಯಾಗಲಿರುವ ಆಂಟೋನಿ ಥಟ್ಟಿಲ್​​​ ಯಾರು ಮತ್ತು ಅವರು ಏನು ಮಾಡುತ್ತಾರೆ ಎಂದು ಇಲ್ಲಿ ತಿಳಿಸಲಾಗಿದೆ.

ಕೀರ್ತಿ ಮತ್ತು ಆಂಟೋನಿ 15 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ನಟಿ 10ನೇ ತರಗತಿಯಲ್ಲಿದ್ದಾಗ ಮತ್ತು ಆಂಟೋನಿ ಪದವಿ ಓದುತ್ತಿದ್ದಾಗ ಅವರಿಬ್ಬರ ಭೇಟಿಯಾಗಿದೆ ಎಂದು ಹೇಳಲಾಗುತ್ತಿದೆ. ಅಂತಹ ಸುದೀರ್ಘ ಸಂಬಂಧದ ಹೊರತಾಗಿಯೂ ಈ ಇಬ್ಬರು ಎಂದಿಗೂ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿಲ್ಲ. ಆಂಟೋನಿ ಒಬ್ಬ ಉದ್ಯಮಿ. ಅವರು ದುಬೈ ಮತ್ತು ಕೇರಳದ ಕೊಚ್ಚಿಯಲ್ಲಿ ತಮ್ಮ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಆಂಟೋನಿ ಅವರು ತಮ್ಮ ಊರಿನಲ್ಲಿ ರೆಸಾರ್ಟ್‌ಗಳನ್ನು ಹೊಂದಿದ್ದಾರೆ. ಕೀರ್ತಿ ಸುರೇಶ್​​ ಅವರ ಕೆಲವು ವ್ಯವಹಾರಗಳು ಅವರ ತವರು ಚೆನ್ನೈನಲ್ಲಿ ನೋಂದಾಯಿಸಲ್ಪಟ್ಟಿವೆ ಎನ್ನಲಾಗಿದೆ.

ಈ ಹಿಂದೆ ಕೀರ್ತಿ ಅವರ ಹೆಸರು ಸಂಗೀತಗಾರ ಅನಿರುದ್ಧ್ ರವಿಚಂದರ್ ಜತೆ ತಳುಕು ಹಾಕಿಕೊಂಡಿತ್ತು. ಮದುವೆ ಆಗಲಿದ್ದಾರೆ ಎಂದೂ ಹೇಳಲಾಗುತಿತ್ತು. ಆದರೆ ಈ ವದಂತಿಗಳನ್ನು ನಟಿ ಮತ್ತು ಆಕೆಯ ತಂದೆ ಸುರೇಶ್ ಕುಮಾರ್ ನಿರಾಕರಿಸಿದ್ದರು. ಕೀರ್ತಿ ಶೀಘ್ರದಲ್ಲೇ ಬೇಬಿ ಜಾನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ವರುಣ್ ಧವನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ಮೂಲಕ ಕೀರ್ತಿ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net