ಕಾವೇರಿ ಪರ ಸಿಡಿದ್ದೆದ್ದ ಕನ್ನಡ ಚಿತ್ರರಂಗ; ಹೋರಾಟದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ?

Untitled design - 2023-09-29T115537.414
Published on

ಬೆಂಗಳೂರು: ಕಾವೇರಿ ವಿಚಾರವಾಗಿ ನಡೆಸಲಾದ ರಾಜ್ಯಾವ್ಯಾಪಿ ಬಂದ್​ಗೆ ಕನ್ನಡ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಲಿದೆಯೇ? ಎಂಬ ಪ್ರಶ್ನೆ ತೀವ್ರ ಚರ್ಚೆಯಲ್ಲಿತ್ತು.

ಈ ಕುರಿತು ಸ್ಯಾಂಡಲ್​ವುಡ್​​ ಹಿರಿಯ ನಟ, ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​ ಖಂಡಿತವಾಗಿ ಚಿತ್ರರಂಗದ ಕಲಾವಿದರು ಪ್ರತಿಭಟನೆಯಲ್ಲಿ ಭಾಗಿಯಾಗುವ ಮುಖೇನ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದರು. ಅದರಂತೆಯೇ ಇಂದು ಅನೇಕ ಕಲಾವಿದರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಕಾವೇರಿ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ದೊರಕಿದ್ದು, ಬೃಹತ್ ವೇದಿಕೆಯ ಕಾರ್ಯಕ್ರಮದಲ್ಲಿ ಚಿತ್ರರಂಗದ ಹಿರಿಯ ಕಲಾವಿದರು ಒಬ್ಬೊಬ್ಬರಾಗಿ ಹೋರಾಟಕ್ಕೆ ಆಗಮಿಸಿದ್ದು, ರಾಷ್ಟ್ರಗೀತೆ ಹೇಳುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಡಾ. ಶಿವರಾಜ್​ಕುಮಾರ್​, ಹಿರಿಯ ನಟಿ ಉಮಾಶ್ರೀ, ಶ್ರೀನಾಥ್, ಪ್ರಮೀಳಾ ಜೋಷಾಯ್​, ಸುಂದರ್​ ರಾಜ್, ಶ್ರೀನಿವಾಸ​ ಮೂರ್ತಿ, ಅನು ಪ್ರಭಾಕರ್​, ಪೂಜಾ ಗಾಂಧಿ, ಚಿಕ್ಕಣ್ಣ, ರಘು ಮುಖರ್ಜಿ, ತಬಲ ನಾಣಿ, ಅನಿರುದ್ಧ್​ ಜತ್ಕರ್​ ಸೇರಿದಂತೆ ಹಲವರು ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net