'ನಮೋ' ಸಂಪುಟದಲ್ಲಿ ಯಾರಿಗೆಲ್ಲ ಸಿಕ್ತು ಸ್ಥಾನ? ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

Untitled design (77)
Published on

ನವದೆಹಲಿ: ಇಂದು ರಾಷ್ಟ್ರಪತಿ ಭವನದಲ್ಲಿ ಅಪಾರ ಸಂಖ್ಯೆಯ ಜನರು ಮತ್ತು ರಾಜಕೀಯ ಗಣ್ಯರ ಎದುರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ವ್ಯಾಪಕ ಜನಮನ್ನಣೆ ದೊರಕಿತು. ಪ್ರತಿಯೊಬ್ಬರಿಗೂ ಪ್ರಮಾಣವಚನ ಬೋಧಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಮೋದಿಯವರೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇನ್ನು ಪ್ರಧಾನಿ ಮೋದಿಯವರ ಸಂಪುಟಕ್ಕೆ ಉತ್ತರ ಪ್ರದೇಶದಿಂದ ರಾಜನಾಥ್‌ ಸಿಂಗ್‌, ಮಧ್ಯಪ್ರದೇಶದಿಂದ ಶಿವರಾಜ್‌ ಸಿಂಗ್‌ ಚೌಹಾಣ್‌, ಹರಿಯಾಣದಿಂದ ಮನೋಹರ್‌ ಲಾಲ್‌ ಖಟ್ಟರ್‌, ಕರ್ನಾಟಕದಿಂದ ಎಚ್‌.ಡಿ.ಕುಮಾರಸ್ವಾಮಿ, ಅಸ್ಸಾಂನಿಂದ ಸರ್ಬಾನಂದ ಸೋನವಾಲ್‌, ಬಿಹಾರದಿಂದ ಜೀತನ್‌ ರಾಮ್‌ ಮಾಂಝಿ ಮಾಜಿ ಸಿಎಂಗಳ ಪಟ್ಟಿಯಲ್ಲಿದ್ದಾರೆ. ಇವರಲ್ಲಿ ಯಾರಿಗೆ ಯಾವ ಖಾತೆ ಕೊಡಲಾಗಿದೆ ಎಂಬುದು ಶೀಘ್ರವೇ ಪ್ರಕಟವಾಗಲಿದೆ.

'ನಮೋ' ಸಂಪುಟ ಸೇರಿದವರು ಪಟ್ಟಿ ಹೀಗಿದೆ:

ಅಮಿತ್‌ ಶಾ, ಮನಸುಖ್‌ ಮಾಂಡವೀಯ, ನಿತಿನ್‌ ಗಡ್ಕರಿ, ರಾಜನಾಥ್‌ ಸಿಂಗ್‌, ಮನೋಹರ್‌ ಲಾಲ್‌ ಖಟ್ಟರ್‌, ಶಿವರಾಜ್‌ ಸಿಂಗ್‌ ಚೌಹಾಣ್‌, ಧರ್ಮೇಂದ್ರ ಪ್ರಧಾನ್‌, ನಿರ್ಮಲಾ ಸೀತಾರಾಮನ್‌, ಸರ್ಬಾನಂದ ಸೋನವಾಲ್‌, ಗಜೇಂದ್ರ ಸಿಂಗ್ ಶೇಖಾವತ್, ಲಲನ್‌ ಸಿಂಗ್‌, ಭೂಪೇಂದ್ರ ಯಾದವ್, ಜೀತನ್‌ ರಾಮ್‌ ಮಾಂಝ, ಎಚ್‌.ಡಿ.ಕುಮಾರಸ್ವಾಮಿ, ವೀರೇಂದ್ರ ಕುಮಾರ್, ಎಸ್‌.ಜೈಶಂಕರ್‌, ಅಶ್ವಿನಿ ವೈಷ್ಣವ್‌, ಹರದೀಪ್‌ ಸಿಂಗ್‌ ಪುರಿ, ಪಿಯೂಷ್ ಗೋಯಲ್‌, ಜಿತೇಂದ್ರ ಸಿಂಗ್‌, ಜ್ಯೋತಿರಾದಿತ್ಯ ಸಿಂಧಿಯಾ, ಸಿ.ಆರ್‌. ಪಾಟೀಲ್‌, ಚಿರಾಗ್‌ ಪಾಸ್ವಾನ್‌, ಶಾಂತನು ಠಾಕೂರ್‌, ಕಿರಣ್‌ ರಿಜುಜು, ಗಿರಿರಾಜ್‌ ಸಿಂಗ್‌, ಸುರೇಶ್‌ ಗೋಪಿ, ಜಯಂತ್ ಚೌಧರಿ.

ಸಾವಿತ್ರಿ ಠಾಕೂರ್‌, ಕೆ.ಅಣ್ಣಾಮಲೈ, ಎಂ.ಎಲ್.ಖಟ್ಟರ್‌, ರಾಮನಾಥ್‌ ಠಾಕೂರ್, ಜಿ.ಕಿಶನ್‌ ರೆಡ್ಡಿ, ಬಂಡಿ ಸಂಜಯ್‌, ಸಂಜಯ್ ಸೇಠ್‌, ಅರುಣ್‌ ರಾಮ್‌ ಮೇಘವಾಲ್‌, ಪ್ರಲ್ಹಾದ ಜೋಶಿ, ಚಂದ್ರಶೇಖರ್‌ ಚೌಧರಿ, ಚಂದ್ರಶೇಖರ್‌ ಪೆಮ್ಮಸಾನಿ, ಚಂದ್ರ ಪ್ರಕಾಶ್‌, ರಾಮ್‌ ಮೋಹನ್‌ ನಾಯ್ಡು, ಜುಯಲ್‌ ಓರಮ್‌, ರವನೀತ್‌ ಸಿಮಗ್‌ ಬಿಟ್ಟು, ಅನುಪ್ರಿಯಾ ಪಟೇಲ್‌, ಜಯಂತ್‌ ಚೌಧರಿ, ಪ್ರತಾಪ್‌ ರಾವ್‌ ಜಾಧವ್‌‌, ಜಿತಿನ್‌ ಪ್ರಸಾದ್‌, ಭಗೀರಥ ಚೌಧರಿ, ಶ್ರೀಪದ್‌ ನಾಯಕ್‌, ಅನ್ನಪೂರ್ಣಾ ದೇವಿ, ಅಜಯ್‌ ತಮ್ಟಾ, ಅನುಪ್ರಿಯಾ ಪಟೇಲ್‌, ರಕ್ಷಾ ಖಾಡ್ಸೆ, ಶೋಭಾ ಕರಂದ್ಲಾಜೆ, ಕಮಲಜಿತ್‌ ಸೆಹ್ರಾವತ್, ರಾವ್‌ ಇಂದ್ರಜಿತ್‌ ಸಿಂಗ್‌, ರಾಮ್‌ ದಾಸ್‌ ಅಠವಾಳೆ, ಹರ್ಷ ಮಲ್ಹೋತ್ರಾ, ಪಂಕಜ್‌ ಚೌಧರಿ, ಕಿಶನ್‌ ಪಾಲ್‌ ಗುರ್ಜರ್‌, ನಿತ್ಯಾನಂದ ರೈ, ಅನುಪ್ರಿಯಾ ಪಟೇಲ್‌, ವಿ.ಸೋಮಣ್ಣ, ಚಂದ್ರಶೇಖರ್‌ ಪೆಮ್ಮಸಾನಿ, ಎಸ್‌ಪಿ ಸಿಂಗ್‌ ಬಘೇಲ್‌, ಕೀರ್ತಿ ವರ್ಧನ್‌ ಸಿಂಗ್‌, ಬಿ.ಎಲ್‌.ವರ್ಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net