ಬಿಬಿಎಂಪಿಯಿಂದ ವೈಟ್ ಟಾಪಿಂಗ್;ಬಿವಿಕೆ ಅಯ್ಯಂಗಾರ್ ರಸ್ತೆ ಸಂಚಾರ ನಿರ್ಬಂಧ

BVK
Published on

ಬೆಂಗಳೂರು: ಬಿವಿಕೆ ಅಯ್ಯಂಗಾರ್ ರಸ್ತೆಯ ಸುಲ್ತಾನ್‌ಪೇಟೆ ಕ್ರಾಸ್‌ನಿಂದ ಕೋದಂಡರಾಮ ಮಂದಿರದ ವರೆಗೂ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಗುರುವಾರದಿಂದ ಆರಂಭಿಸಿದ್ದು, ಕೆಲಸ ಮುಗಿಯುವವರೆಗೂ ತಾತ್ಕಾಲಿಕವಾಗಿ ಸಂಚಾರ ಮಾರ್ಗವನ್ನು ನಿರ್ಬಂಧಿಸಿ ಸಂಚಾರ ಪೊಲೀಸರು ಬದಲಿ ಮಾರ್ಗವನ್ನು ಕಲ್ಪಿಸಿದ್ದಾರೆ.

ಮೊದಲ ಹಂತದ ಕಾಮಗಾರಿಯು ಬಿವಿಕೆ ಅಯ್ಯಂಗಾರ್ ರಸ್ತೆಯ ಸುಲ್ತಾನಪೇಟೆ ಕ್ರಾಸ್‌ನಿಂದ ಕೋದಂಡರಾಮ ದೇವಸ್ಥಾನದ ವರೆಗೆ ಕಾಮಗಾರಿ ನಡೆಯಲಿದೆ. ಮೈಸೂರು ರಸ್ತೆಯಿಂದ ಬರುವ ವಾಹನಗಳು ಸುಲ್ತಾನಪೇಟೆ ಕ್ರಾಸ್‌ನಲ್ಲಿ ಎಡ ತಿರುವು ಪಡೆದು ಕೆ.ವಿ. ಟೆಂಪಲ್ ರಸ್ತೆ ಬಳೇ ಪೇಟೆ ಮುಖ್ಯ ರಸ್ತೆಯ ಮಾರ್ಗವಾಗಿ ಸಂಚರಿಸಿ ಕಿಲಾರಿ ರಸ್ತೆಗೆ ಬಲ ತಿರುವು ಪಡೆದು ಪುನಃ ಬಿವಿಕೆ ಅಯ್ಯಂಗಾರ್ ರಸ್ತೆಯನ್ನು ಸಂಪರ್ಕಿಸಬಹುದು.

ಕೆ.ಜಿ. ರಸ್ತೆಯ ಕಡೆಯಿಂದ ಮೈಸೂರು ರಸ್ತೆಯ ಕಡೆಗೆ ಸಂಚರಿಸುವ ವಾಹನಗಳು ಎಂದಿನಂತೆ ಬಿವಿಕೆ ಅಯ್ಯಂಗಾರ್ ರಸ್ತೆಯ ಪೂರ್ವ ಪಥದ ಮೂಲಕ ಸಂಚರಿಸಬಹುದು. ಚಿಕ್ಕಪೇಟೆ ಮುಖ್ಯರಸ್ತೆಯಿಂದ ಬರುವ ವಾಹನಗಳು ಓಟಿಸಿ ರಸ್ತೆಯ ಮೂಲಕ ಸಾಗಬಹುದು.

ಎರಡನೇ ಹಂತದ ಕಾಮಗಾರಿಯು ಕೋದಂಡರಾಮ ದೇವಸ್ಥಾನದಿಂದ ಸುಲ್ತಾನಪೇಟೆ ಕ್ರಾಸ್ ವರೆಗೆ ಕಾಮಗಾರಿ ನಡೆಯಲಿದೆ. ಕೆ.ಜಿ. ರಸ್ತೆ ಕಡೆಯಿಂದ ಬರುವ ವಾಹನಗಳು ಆರ್‌ಟಿ ಸ್ಟ್ರೀಟ್ ಜಂಕ್ಷನ್‌ನಿಂದ ಒನ್ ವೇನಲ್ಲಿ ಸಾಗಿ ಸುಲ್ತಾನ್‌ಪೇಟೆ ಜಂಕ್ಷನ್ ವರೆಗೆ ಸಂಚಿಸಿ ಎಡಕ್ಕೆ ತಿರುಗಿ ಆನಂತರ ಮೈಸೂರು ರಸ್ತೆ ಕಡೆಗೆ ಸಂಚರಿಸಬಹುದು.

ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಸುಲ್ತಾನಪೇಟೆ ಕ್ರಾಸ್‌ನಲ್ಲಿ ಎಡ ತಿರುವು ಪಡೆದು ಕೆ.ವಿ. ಟೆಂಪಲ್ ರಸ್ತೆಗೆ ಬಲ ತಿರುವು ಪಡೆದು ಬಳೇಪೇಟೆ ಮುಖ್ಯರಸ್ತೆ ಮಾರ್ಗವಾಗಿ ಸಾಗಿ ಕಿಲಾರಿ ರಸ್ತೆಯಲ್ಲಿ ಬಲ ತಿರುವು ಪಡೆದು ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಸಂಪರ್ಕಿಸಬಹುದು ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net