ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ವೇನಲ್ಲಿ ವ್ಹೀಲಿಂಗ್: ನಾಲ್ವರ ಬಂಧನ, 2 ಬೈಕ್​ ವಶಕ್ಕೆ​

Wheeling
Published on

ರಾಮನಗರ: ಸಾಲು ಸಾಲು ಅಪಘಾತಗಳಿಂದ ಅಪಖ್ಯಾತಿ ಗುರಿಯಾಗಿರುವ ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ವೇನಲ್ಲಿ ವ್ಹೀಲಿಂಗ್​ ಮಾಡುವ ಮೂಲಕ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಪುಂಡರನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ.

ನಾಲ್ವರು ಆರೋಪಿಗಳನ್ನು ಬಂಧಿಸಿ, ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪುಂಡರು ಕಳೆದ ನಾಲ್ಕೈದು ತಿಂಗಳಿಂದ ಎಕ್ಸ್​ಪ್ರೆಸ್​ವೇನಲ್ಲಿ ಆಗಾಗ ವ್ಹೀಲಿಂಗ್ ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಕುಂಬಳಗೊಡು, ಬಿಡದಿ, ಕೆಂಗೇರಿ ರಸ್ತೆಯಲ್ಲಿ ಪುಂಡರು ವ್ಹೀಲಿಂಗ್​ ಮಾಡಿದ್ದರು.

ಒನ್ ವೇಯಲ್ಲಿಯೂ ವ್ಹೀಲಿಂಗ್ ಮಾಡಿ ಹುಚ್ಚಾಟ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿರುವುದನ್ನು ಗಮನಿಸಿ, ಅದರ ಮೂಲ ಹುಡುಕಿ ಪುಂಡರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಮೊಹಮ್ಮದ್ ಹುಸೇನ್, ವಾಸೀಂ ಖಾನ್, ಮುಜಾಮೀನ್ ಹಾಗೂ ಸುಲ್ತಾನ್ ಎಂದು ಗುರುತಿಲಾಗಿದೆ. ಬಂಧಿತರಿಂದ 2 ಬೈಕ್ ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net