More

    ಅತಿಯಾಗಿ ಡ್ರೈಫ್ರೂಟ್ಸ್ ಸೇವಿಸ್ತೀರಾ? ಅದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

    ಡ್ರೈಫ್ರೂಟ್ಸ್ ಎಂಬುದು ಪೋಷಕಾಂಶಗಳ ಕಣಜ. ಇದನ್ನು ನಿತ್ಯವೂ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೇವೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ, ಅತಿಯಾದರೆ ಅಮೃತವೂ ವಿಷ ಎನ್ನುವ ಮಾತೊಂದಿದೆ. ಯಾವುದನ್ನೇ ಆಗಲಿ ನಿಯಮಿತವಾಗಿ ಸೇವನೆ ಮಾಡಬೇಕು. ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸಿದ್ದಲ್ಲಿ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು.

    ಪ್ರತಿಯೊಬ್ಬರ ಮನೆಯಲ್ಲೂ ಡ್ರೈಫ್ರೂಟ್ಸ್​ ಅನ್ನು ವಿವಿಧ ರೀತಿಯಲ್ಲಿ ಬಳಸುತ್ತಾರೆ. ತನ್ನ ಸಮೃದ್ಧ ಪೋಷಕಾಂಶಗಳ ಗುಣದಿಂದಾಗಿ ಡ್ರೈಫ್ರೂಟ್ಸ್​ ಹಲವರು ನೆಚ್ಚಿನ ಆಹಾರವಾಗಿದೆ. ಈ ಡ್ರೈ ಫ್ರೂಟ್ಸ್​ನಲ್ಲಿ ಸಕ್ಕರೆ ಮತ್ತು ಕ್ಯಾಲರಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸಿದಾಗ, ತೂಕ ಹೆಚ್ಚಳ ಮತ್ತು ಗ್ಯಾಸ್ಟ್ರಿಕ್​ನಂತಹ ಸಮಸ್ಯೆಗಳು ಕಾಡಬಹುದು. ಉಪ್ಪಿನಾಂಶ ಭರಿತ ಬೀಜಗಳು ರಕ್ತದ ಒತ್ತಡ, ಮಲಬದ್ಧತೆ, ಅತಿಸಾರ ಅಥವಾ ವಾಯುಗೂ ಕಾರಣವಾಗಬಹುದು.

    ಇದನ್ನೂ ಓದಿ: ಕ್ಯಾನ್ಸರ್ ಔಷಧಕ್ಕೆ ತೆರಿಗೆ ವಿನಾಯಿತಿ?; ಜಿಎಸ್​ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ

    ಡ್ರೈಫ್ರೂಟ್ಸ್​ ಅನೇಕ ಜನರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಈಗ ನಾವು ಡ್ರೈಫ್ರೂಟ್ಸ್​ ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.

    1. ಅಲರ್ಜಿ: ಡ್ರೈಫ್ರೂಟ್ಸ್​ ಕೆಲವೊಮ್ಮೆ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟು ಮಾಡಬಹುದು. ತುರಿಕೆ, ಉಸಿರಾಟದ ತೊಂದರೆ ಹಾಗೂ ಗಂಟಲು ಕೆರೆದಂತಹ ಸಮಸ್ಯೆ ಕಾಡಬಹುದು. ಹೀಗಾಗಿ ಅಲರ್ಜಿ ಇರುವವರು ಡ್ರೈಫ್ರೂಟ್ಸ್​ ತಿನ್ನುವುದನ್ನು ನಿಯಂತ್ರಿಸಬೇಕು.

    2. ತೂಕ ಹೆಚ್ಚಳ: ಡ್ರೈಫ್ರೂಟ್ಸ್​ನಲ್ಲಿ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹೆಚ್ಚಾಗಿ ತಿನ್ನುವುದರಿಂದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಿಯಮಿತವಾಗಿ ಸೇವನೆ ಮಾಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.

    3. ಕಿಡ್ನಿ ಕಲ್ಲು: ಗೋಡಂಬಿ, ಬಾದಾಮಿ ಮತ್ತು ಕಡಲೆಕಾಯಿಗಳು ಆಕ್ಸಲೇಟ್‌ ಅಂಶಗಳನ್ನು ಹೊಂದಿರುತ್ತವೆ. ಇದು ಕಿಡ್ನಿ ಕಲ್ಲು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಈ ಆಕ್ಸಲೇಟ್ ಅಂಶ ಕಿಡ್ನಿ ಕಲ್ಲುಗಳ ರಚನೆಗೆ ಕಾರಣವಾಗುತ್ತದೆ.

    4. ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು: ಡ್ರೈ ಫ್ರೂಟ್ಸ್ ಕಳಪೆ ಜೀರ್ಣಕ್ರಿಯೆ ಹೊಂದಿರುವ ಜನರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಗ್ಯಾಸ್ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಗೋಡಂಬಿಯಲ್ಲಿರುವ ಫೈಬರ್ ಮತ್ತು ಕೊಬ್ಬಿನ ಅಂಶ ಇದಕ್ಕೆ ಕಾರಣ.

    ಇದನ್ನೂ ಓದಿ: ವಿರೋಧದ ಮಧ್ಯೆಯೂ ಪ್ರಿಯಕರನನ್ನು ವರಿಸಿದ ಯುವತಿ: ರಕ್ಷಣೆ ಕೋರಿ ಠಾಣೆಗೆ ಹೋದವಳಿಗೆ ಕಾದಿತ್ತು ಆಘಾತ!​

    ಹೀಗಾಗಿ ಯಾವುದೇ ಆಹಾರವನ್ನು ಸೇವಿಸಿ ಆದರೆ, ಎಲ್ಲವೂ ಮಿತಿಯಲ್ಲಿ ಇರಲಿ. ಅತಿಯಾದರೆ ಅಮೃತವೂ ವಿಷ ಎಂಬ ಮಾತು ನೆನಪಿನಲ್ಲಿ ಇರಲಿ. (ಏಜೆನ್ಸೀಸ್​)

    ಡ್ರೈ ಫ್ರೂಟ್ಸ್ ಎಂಬ ಪೋಷಕಾಂಶಗಳ ಕಣಜ: ನಿತ್ಯ ಆಹಾರದಲ್ಲಿ ಡ್ರೈ ಫ್ರೂಟ್ಸ್ ಇದ್ರೆ ನೀವಾಗುವಿರಿ ಫಿಟ್​ ಆ್ಯಂಡ್​ ಫೈನ್​

    ಇವರೇ ನೋಡಿ ಭಾರತದ ಶ್ರೀಮಂತ ಕ್ರಿಕೆಟಿಗ: ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ನೀವು ಬೆರಗಾಗೋದು ಖಂಡಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts