More

    ಕ್ಯಾನ್ಸರ್ ಔಷಧಕ್ಕೆ ತೆರಿಗೆ ವಿನಾಯಿತಿ?; ಜಿಎಸ್​ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ

    ನವದೆಹಲಿ: ಇದೇ 11ಕ್ಕೆ ನಡೆಯುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿ ಸಭೆಯಲ್ಲಿ ಕ್ಯಾನ್ಸರ್​ಗೆ ಬಳಸುವ ‘ಡಿನುಟುಕ್ಸಿಮಾಬ್’ ಔಷಧದ ಆಮದಿಗೆ ಮತ್ತು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡಲಾಗುವ ವೈದ್ಯಕೀಯ ಉದ್ದೇಶದ ಆಹಾರ (ಎಫ್​ಎಸ್​ಎಂಪಿ)ಕ್ಕೆ ತೆರಿಗೆ ವಿನಾಯಿತಿ ಸಿಗುವ ಸಂಭವ ಇದೆ. ಪ್ರತಿಷ್ಠಿತ ಸಂಧೋಶನಾ ಸಂಸ್ಥೆಗಳು, ಅಧ್ಯಯನ ಕೇಂದ್ರ ಗಳನ್ನು ಸಂಯೋಜಿತ ತೆರಿಗೆಯ ವಿನಾಯಿತಿ ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹಾಲಿ ಈ ಬಾಬ್ತಿಗೆ ಶೇ. 5ರಿಂದ 12ರವರೆಗೆ ತೆರಿಗೆ ಇದೆ.

    ಮಲ್ಟಿಪೆಕ್ಸ್ ಸಿನಿಮಾ ಮಂದಿರಗಳಲ್ಲಿ ನೀಡಲಾಗುವ ಆಹಾರ ಅಥವಾ ಪಾನೀಯ ಗಳಿಗೆ ಶೇ. 22ರಷ್ಟು ಹೆಚ್ಚುವರಿ ಕರ (ಸೆಸ್) ವಿಧಿಸುವ ಮತ್ತು ಯುಟಿಲಿಟಿ ವಾಹನಗಳ ತೆರಿಗೆ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಂಭವ ಇದೆ. ಉಪಗ್ರಹ ಉಡಾವಣಾ ಸೇವೆಯಲ್ಲಿ ಖಾಸಗಿ ಪಾಲುದಾರರಿಗೆ ಇರುವ ಜಿಎಸ್​ಟಿ ವಿನಾಯಿತಿ ಬಗ್ಗೆಯೂ ಸಭೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಅಧಿಕಾರಿಗಳನ್ನು ಒಳಗೊಂಡ ಫಿಟ್​ವೆುಂಟ್ ಸಮಿತಿಯು ಕೆಲವು ಪ್ರಮುಖ ವಿಚಾರಗಳ ಬಗ್ಗೆ ಸಭೆ ಸ್ಪಷ್ಟಪಡಿಸುವುದು ಸೂಕ್ತ ಎಂದು ಸಲಹೆ ನೀಡಿದೆ ಎಂದು ಮೂಲಗಳು ಹೇಳಿವೆ. ಮಂಗಳವಾರ ನಡೆಯುವ ಸಭೆಯು ಮಂಡಳಿಯ 50ನೇ ಮೀಟಿಂಗ್ ಆಗಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷೆ ವಹಿಸಲಿದ್ದಾರೆ.

    ಮತ್ತೆ ದಾಖಲೆ ಬರೆದ ಷೇರುಪೇಟೆ

    ಮುಂಬೈ: ಭಾರತೀಯ ಷೇರು ಸೂಚ್ಯಂಕಗಳು ಗುರುವಾರ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸಿವೆ. ಸೆನ್ಸೆಕ್ಸ್ 339.60 ಅಂಕ ಏರಿಕೆಯೊಂದಿಗೆ 65,785.64ರಲ್ಲಿ ಮುಕ್ತಾಯವಾಯಿತು. ಇಂಟ್ರಾ-ಡೇ ವಹಿವಾಟಿನಲ್ಲಿ 386.94 ಏರಿಕೆ ಕಂಡು 65,832.98ವರೆಗೂ ತಲುಪಿತ್ತು. ನಿಫ್ಟಿ 98.80 ಪಾಯಿಂಟ್ ಏರಿಕೆ ಕಂಡು 19,497.30ಕ್ಕೆ ಕೊನೆಗೊಂಡಿತು. ಮಹಿಂದ್ರಾ ಆಂಡ್ ಮಹಿಂದ್ರಾ ಶೇ. 5 ಏರಿಕೆ ಕಂಡಿತು. ಪವರ್ ಗ್ರಿಡ್, ಟಾಟಾ ಮೋಟಾರ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಎನ್​ಟಿಪಿಸಿ, ಆಕ್ಸಿಸ್ ಬ್ಯಾಂಕ್, ನೆಸ್ಲೆ, ಕೋಟಕ್ ಮಹೀಂದ್ರಾ ಬ್ಯಾಂಕ್, ಏಷ್ಯನ್ ಪೇಂಟ್ ಮತ್ತು ವಿಪೋ› ಲಾಭ ಗಳಿಸಿದವು. ಮಾರುತಿ, ಎಚ್​ಸಿಎಲ್ ಟೆಕ್ನಾಲಜೀಸ್, ಬಜಾಜ್ ಫೈನಾನ್ಸ್, ಇಂಡಸ್​ಇಂಡ್ ಬ್ಯಾಂಕ್, ಇನ್ಪೋಸಿಸ್ ಮತ್ತು ಟಾಟಾ ಸ್ಟೀಲ್ ಇಳಿಕೆ ಕಂಡವು. ವಿದೇಶಿ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾತೈಲ ಶೇ. 0.27 ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್​ಗೆ 76.86 ಡಾಲರ್ ತಲುಪಿದೆ.

    ಚಿನ್ನ 70 ರೂ. ಏರಿಕೆ

    ದೆಹಲಿಯಲ್ಲಿ ಗುರುವಾರ ಚಿನ್ನದ ಬೆಲೆ 10 ಗ್ರಾಂಗೆ 70 ರೂ. ಏರಿಕೆಯಾಗಿ 59,350 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿ 600 ರೂ. ಜಿಗಿದು ಪ್ರತಿ ಕೆಜಿಗೆ 72,100 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್​ಗೆ ಚಿನ್ನ 1,921 ಡಾಲರ್ ಆಗಿದ್ದರೆ, ಬೆಳ್ಳಿ ಪ್ರತಿ ಔನ್ಸ್​ಗೆ 23.17 ಡಾಲರ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts