ಶೀಘ್ರದಲ್ಲೆ ಮತ್ತೊಂದು ವಿಶೇಷ ಫೀಚರ್​ ನೀಡಲು ಮುಂದಾದ ವಾಟ್ಸ್​ಆ್ಯಪ್

whatsapp
Published on

ದೆಹಲಿ: ಜಗತ್ತಿನಾದ್ಯಂತ ಸಾವಿರಾರು ಮಿಲಿಯನ್​ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ವಾಟ್ಸ್​ಆ್ಯಪ್ ಕಂಪನಿಯು ತನ್ನ ಬಳಕೆದಾರರಿಗೆ ಹಿಂದಿನಿಂದಲೂ ಹೊಸ ಫೀಚರ್​​ಗಳನ್ನು ನೀಡುತ್ತಲೇ ಬಂದಿದೆ.

ಅಲ್ಲದೇ, ಕೆಲವು ದಿನಗಳ ಹಿಂದೆ ಖಾಸಗಿತನ ಮತ್ತು ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ವ್ಯಾಟ್ಸ್​​ಆ್ಯಪ್ ಚಾಟ್​​ಲಾಕ್ ಹಾಗೂ ಸಂದೇಶ ಕಳುಹಿಸಿದ ಬಳಿಕ 15 ನಿಮಿಷದೊಳಗಾಗಿ ತಿದ್ದುಪಡಿ ಮಾಡುವ ಫೀಚರ್​ನ್ನು ತನ್ನ ಬಳಕೆದಾರರಿಗೆ ನೀಡಿತ್ತು.

ಸದ್ಯ, ಕಂಪನಿಯು ತನ್ನ ಬಳಕೆದಾರರಿಗೆ ಯೂಸರ್​ ನೇಮ್​ ಎಂಬ ವಿಶಿಷ್ಟ ಫೀಚರ್​ನ್ನು ನೀಡುವ ಬಗ್ಗೆ ಯೋಚಿಸುತ್ತಿದೆ. ಇದರ ಪ್ರಕಾರ ಬಳಕೆದಾರು ತಮ್ಮ ಹೆಸರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ತಮ್ಮ ಅಕೌಂಟ್​ಗೆ ಮತ್ತೊಂದು ಗೌಪ್ಯ ಹೆಸರನ್ನು ಸೇರಿಸಬಹುದಾಗಿದೆ ಎಂದು ಹೇಳಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net