More

    ಗ್ಯಾರಂಟಿಗಳನ್ನು ಕೊಡದಿದ್ದರೆ ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆ: ಕಾಂಗ್ರೆಸ್ ಶಾಸಕ ಎನ್.ಎಚ್.ಕೋನರೆಡ್ಡಿ

    -ನನಗೆ ಕೃಷಿ ಸಚಿವನಾಗುವ ಆಸೆಯಿದೆ

    ಹುಬ್ಬಳ್ಳಿ: ಗ್ಯಾರಂಟಿಗಳನ್ನು ಕೊಡದೆ ಹೋದ್ರೆ ನಾನು ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಸಭೆಯಲ್ಲಿ ನಾನು ಭಾಗವಹಿಸಿದ್ದೇನು. ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದಿದ್ದಾರೆ. ಅಕಾಸ್ಮಾತ್ ಜಾರಿ ಮಾಡದೇ ಹೋದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಅಷ್ಟರ ಮಟ್ಟಿಗೆ ನಾನು ಗ್ಯಾರಂಟಿ ಕೋಡುತ್ತೇನೆ ಎಂದಿದ್ದಾರೆ.

    ಬಿಜೆಪಿಗೆ ಯಾಕೆ ಇಷ್ಟು ಅವಸರ? ಐದು ವರ್ಷದಲ್ಲಿ‌ ಅವರು ಒಂದೂ ಕೆಲಸ ಮಾಡಿಲ್ಲ.ಇವಾಗ ಸರ್ಕಾರ ರಚನೆ ಆಗಿದೆ. ಅದಕ್ಕೊಂದು ಕಾಲಾವಕಾಶ ಬೇಕು,ಅಂಕಿ ಅಂಶ ಬೇಕು. ಕೊಟ್ಟ ಗ್ಯಾರಂಟಿಯನ್ನು 100ಕ್ಕೆ 100ರಷ್ಟು ಜಾರಿ ಮಾಡುತ್ತೇವೆ. ಗ್ಯಾರಂಟಿ ಬಗ್ಗೆ ನಾನು ಗ್ಯಾರಂಟಿ ಇದ್ದೇನೆ ಎಂದು ವಿಶ್ವಾಸ ಕೊಟ್ಟಿದ್ದಾರೆ.

    ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಫೋಟೋದಲ್ಲಿರುವ ಚಿರತೆ ಪತ್ತೆಹಚ್ಚಬಲ್ಲರು!

    ಬಿಜೆಪಿಯವರು 15 ಲಕ್ಷ ಹಾಕ್ತೀನಿ ಅಂದ್ರು, 2 ಕೋಟಿ ಉದ್ಯೋಗ ಕೊಡುತ್ತೇವೆ ಅಂದರು, ಆದರೆ ಅದನ್ನು ಯಾರೂ ಕೇಳೋದಿಲ್ಲ. ಎಷ್ಟೇ ಹಣ ಖರ್ಚ ಆದರೂ ನಮ್ಮ ನಾಯಕರು ಜಾರಿ ಮಾಡುತ್ತೇವೆ. ಆರ್​ಎಸ್​ಎಸ್​​, ಭಜರಂಗದಳ ನಿಷೇಧ ಬಗ್ಗೆ ನಾನು ಮಾತನಾಡಲ್ಲ ಎಂದು ತಿಳಿಸಿದ್ದಾರೆ.

    ನಾಳೆ ಲಿಸ್ಟ್ ಅಲ್ಲಿ ಬಂದ್ರೆ ಮಂತ್ರಿ ಸ್ಥಾನ ತಗೆದುಕೊಳ್ಳುತ್ತೇನೆ. ಧಾರವಾಡ ಜಿಲ್ಲೆಯಲ್ಲಿ ಸಂತೋಷ್ ಲಾಡ್, ವಿನಯ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಇದ್ದಾರೆ. ನನಗೂ ಒಮ್ಮೆ ಕೃಷಿ ಸಚಿವ ಸ್ಥಾನ ಆಗೋ ಬಯಕೆ ಇದೆ. ಆದರೆ ಅಂತಿಮ ನಿರ್ಧಾರ ಮುಖ್ಯಮಂತ್ರಿಗಳ ಪರಮಾಧಿಕಾರ. ಹೀಗಾಗಿ ಅವರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಧಾರವಾಡ ಜಿಲ್ಲೆಯಲ್ಲಿ ಹಿರಿಯರಿದ್ದಾರೆ,ಮುಂದೆ ಯುವಕರನ್ನು ಮಾಡೋ ಅವಕಾಶ ಸಿಕ್ರೆ ನೋಡೋಣ ಎಂದು ಹೇಳಿದ್ದಾರೆ.

    ಹೊಸ ಸಂಸತ್​ ಭವನವನ್ನು ರಾಷ್ಟ್ರಪತಿಯಿಂದ ಉದ್ಘಾಟಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts