ಇನ್ನು ವಾಟ್ಸ್ಆ್ಯಪ್ ಮೂಲಕ HD ಫೋಟೊ ಕಳಿಸಬಹುದು!

whatsapp
Published on

ನವದೆಹಲಿ: ಹೊಸ ವೈಶಿಷ್ಟ್ಯಗಳೊಂದಿಗೆ ನಿರಂತರವಾಗಿ ಅಪ್ಡೇಟ್ ಆಗುವ ಕೆಲವೇ ಅಪ್ಲಿಕೇಶನ್ಗಳಲ್ಲಿ ವಾಟ್ಸಾಪ್ ಒಂದಾಗಿದೆ. ಈಗ, ಮೆಟಾ ಮಾಲೀಕತ್ವದ ವಾಟ್ಸ್ಆ್ಯಪ್, ಮತ್ತೊಂದು ಫೀಚರ್ ಒಂದನ್ನು ಪರೀಕ್ಷಿಸುತ್ತಿದೆ. ಇದು ಬಳಕೆದಾರರಿಗೆ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ HD ಫೋಟೋಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.

ವಾಟ್ಸ್ಆ್ಯಪ್ ಬೀಟಾ ಇನ್ಫೋದ ಇತ್ತೀಚಿನ ವರದಿಯ ಪ್ರಕಾರ, ಐಒಎಸ್ ಮತ್ತು ಆಂಡ್ರಾಯ್ಡ್ ಎರಡಕ್ಕೂ ವಾಟ್ಸಾಪ್ ಪರೀಕ್ಷಿಸುತ್ತಿರುವ ಇತ್ತೀಚಿನ ಬೀಟಾ ಆವೃತ್ತಿಯು ಇತರರಿಗೆ ಫೋಟೋಗಳನ್ನು ಕಳುಹಿಸುವಾಗ ಹೊಸ HD ಫೋಟೋ ಗುಣಮಟ್ಟದ ಆಯ್ಕೆಯನ್ನು ಪರಿಚಯಿಸಿದೆ. ಬಳಕೆದಾರರು ಪ್ಲಾಟ್ ಫಾರ್ಮ್ ನಲ್ಲಿ ಹಂಚಿಕೊಂಡಾಗ ವಾಟ್ಸಾಪ್ ಸ್ವಯಂಚಾಲಿತವಾಗಿ ಚಿತ್ರವನ್ನು ಕಂಪ್ರೆಸ್ ಮಾಡುತ್ತದೆ. ಆದರೆ ಈ ಹೊಸ ವೈಶಿಷ್ಟ್ಯದೊಂದಿಗೆ, ಹೆಚ್ಚಿನ ರೆಸಲ್ಯೂಶನ್ ನಲ್ಲಿ ಫೋಟೋಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net