ಗ್ರಾಹಕರಿಗೆ ತಟ್ಟಲಿದೆಯಾ ಹಾಲಿನ ದರ ಏರಿಕೆ ಬಿಸಿ? ಬೆಲೆ ಏರಿಕೆಗೆ ಪಟ್ಟು ಹಿಡಿದ ಒಕ್ಕೂಟ!

amil nandini merer
Published on

ಬೆಂಗಳೂರು: ಚುನಾವಣೆಗೂ ಮುನ್ನ, ಬಿಜೆಪಿ ಅಧಿಕಾರದಲ್ಲಿದ್ದಾಗ ಹಾಲಿನ ದರ ಏರಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಲಿನ ದರ ಏರಿಸದಂತೆ ಸೂಚನೆ ನೀಡಿದ್ದರು. ಕೆಲ ತಿಂಗಳು ಕಾಲ ನಿಶ್ಚಿಂತರಾಗಿದ್ದ ಜನತೆ, ಇದೀಗ ಮತ್ತೊಮ್ಮೆ ಹಾಲಿನ ದರದ ಹೆಚ್ಚಳದ ಬಗ್ಗೆ ಯೋಚನೆ ಮಾಡುವ ಕ್ಷಣ ಬಂದಿದೆ ಎಂದೇ ಹೇಳಬಹುದು.

ಇದೀಗ ಹಾಲಿನ ದರ ಏರಿಸಲು ಬಮೂಲ್ (BaMUL, Bangalore Milk Union Limited) ಚಿಂತನೆ ನಡೆಸುತ್ತಿದ್ದು ದರ ಪರಿಷ್ಕರಿಸುವಂತೆ ಪಟ್ಟು ಹಿಡಿದಿದೆ. ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟ ಪಟ್ಟು ಹಿಡಿದಿದ್ದು ಇದೀಗ ಪಶು ಸಂಗೋಪನೆ ಸಹಕಾರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದೆ.

ಆದರೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲು ಇನ್ನೂ ಸಮಯ ಸಿಗದ ಕಾರಣ ನಾಳೆ ಅಥವಾ ನಾಡಿದ್ದು ಭೇಟಿ ಮಾಡಿ ಸಲ್ಲಿಸಲು ಬಮೂಲ್ ಅಧ್ಯಕ್ಷ ಚಿಂತನೆ ಮಾಡಿದ್ದಾರೆ.

ಪ್ರತೀ ಲೀಟರ್ ಹಾಲಿನ ದರವನ್ನು 5 ರೂ. ಏರಿಕೆ ಮಾಡುವಂತೆ ಪ್ರಸ್ತಾವನೆ ಇದ್ದು ಈ ಬಗ್ಗೆ ಹಾಲು ಒಕ್ಕೂಟ ಪಟ್ಟು ಹಿಡಿದು ಕೆಲಸ ಮಾಡುತ್ತಿದೆ. ಈ ವಿಚಾರದ ಕುರಿತಾಗಿ ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ದಿಗ್ವಿಜಯ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net