More

    ಹಾಲಿನ ದರ ಏರಿಕೆ ಯಾಕಾಯ್ತು? ಎಷ್ಟಾಯ್ತು? ಇಲ್ಲಿದೆ ಫುಲ್​ ಡೀಟೇಲ್ಸ್​

    ಬೆಂಗಳೂರು: ‘ಸದ್ಯದಲ್ಲೇ ಹಾಲಿನ ದರ ಹೆಚ್ಚಿಸುತ್ತೇವೆ’ ಎಂದು ಅ.31 ರಂದು ಕೆಎಂಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಾರ್ಯಕ್ರಮ ಒಂದರಲ್ಲಿ ಸುಳಿವು ನೀಡಿದ್ದರು. ಈಗ ಅದು ನಿಜವಾಗಿದೆ. ಹಾಲು ಮೊಸರಿನ ಪರಿಷ್ಕೃತ ದರಗಳು ಇವತ್ತು (ನ.14) ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ ಎಂದು ಕೆಎಂಫ್​ ಆದೇಶ ಹೊರಡಿಸಿದ್ದು ಈ ಹೆಚ್ಚುವರಿ ದರವನ್ನು ಪ್ರೋತ್ಸಾಹ ಧನ ರೂಪದಲ್ಲಿ ರೈತರಿಗೆ ನೀಡಲಾಗುವುದು ಎಂದು ಕೆಎಂಫ್​ ಮಾಹಿತಿ ನೀಡಿದೆ.

    ಈಗ ಹೊಸ ದರಪಟ್ಟಿಯ ಪ್ರಕಾರ ಹಾಲಿನ ಬೆಲೆ ಪ್ರತಿ ಲೀಟರ್​ಗೆ 3 ರೂ. ಏರಿದ್ದು ಮೊಸರಿನ ಬೆಲೆ ಪ್ರತಿ ಕೆಜಿಗೆ 3 ರೂ. ಏರಿದೆ. ಈ ಹಿಂದೆ ಫೆಬ್ರವರಿ 2020 ರಲ್ಲಿ ಕೊನೆಯ ಬಾರಿ ಹಾಲಿನ ದರ 2 ರೂ. ಹೆಚ್ಚಳವಾಗಿತ್ತು.

    ಹಾಲಿನ ದರ ಹೆಚ್ಚಾಗಿದ್ದು ಏಕೆ?

    ಈ ಬಾರಿ ಅನೇಕ ಕಾರಣಗಳು ಜೊತೆ ಸೇರಿ ಹಾಲಿನ ದರ ಹೆಚ್ಚಳದಲ್ಲಿ ಪಾತ್ರವಹಿಸಿವೆ. ಈ ಬಾರಿ ಹವಾಮಾನ ವೈಪರೀತ್ಯ ಆಗಿರುವ ಕಾರಣದಿಂದ ಮೇವು ಸಿಗುತ್ತಿಲ್ಲ. ಹೀಗಾಗಿ ಹಸುವಿಗೆ ನೀಡುವ ಮೇವಿನ ದರ ಹೆಚ್ಚಾಗಿದೆ. ಇನ್ನು ಅನೇಕ ಕಡೆಗಳಲ್ಲಿ ಹಸುವಿಗೆ ಚರ್ಮ ಗಂಟು ರೋಗ ಬಂದಿದ್ದು ಇದರಿಂದಾಗಿ ಹಾಲು ಉತ್ಪಾದಕರು ನಷ್ಟ ಅನುಭವಿಸುತ್ತಿದ್ದಾರೆ. ಅದಲ್ಲದೆ ಸಾಗಾಣಿಕೆ ವೆಚ್ಚ, ವಿದ್ಯುತ್, ಪ್ಯಾಕಿಂಗ್, ಸಲಕರಣೆ ವೆಚ್ಚ, ಹೀಗೆ ಅನೇಕ ಉತ್ಪಾದನಾ ವೆಚ್ಚಗಳು ಶೇಕಡ 25 ರಿಂದ 35 ರಷ್ಟು ಹೆಚ್ಚಿದೆ. ಹೀಗಾಗಿ ಅನಿವಾರ್ಯವಾಗಿ ಹಾಲಿನ ಬೆಲೆ ಏರಿದೆ.

    ನಂದಿನಿ ಹಾಲಿನ ದರ ಎಷ್ಟೆಷ್ಟು ಹೆಚ್ಚಾಗಿದೆ?

    ಟೋನ್ಡ್ ಹಾಲು 37 ರಿಂದ 40 ರೂ.
    ಹೊಮೋಜಿನೈಸ್ಡ್ಹಾಲು 38 ರಿಂದ 40 ರೂ.
    ಹೊಮೊಜಿನೈಸ್ಡ್ ಹಸುವಿನ ಹಾಲು 42 ರಿಂದ 45 ರೂ.
    ಸ್ಪೆಷಲ್ ಹಾಲು 43 ರಿಂದ 46 ರೂ.
    ಶುಭಂ ಹಾಲು 43 ರಿಂದ 46 ರೂ.
    ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರಿಂದ 47 ರೂ.
    ಸಮೃದ್ಧಿ ಹಾಲು 48 ರಿಂದ 51 ರೂ.
    ಸಂತೃಪ್ತಿ ಹಾಲು 50 ರಿಂದ 53 ರೂ.
    ಡಬಲ್ ಟೋನ್ಡ್ ಹಾಲು 36 ರಿಂದ 39 ರೂ.
    ಮೊಸರು ಪ್ರತಿ ಕೆಜಿಗೆ 45 ರಿಂದ 48 ರೂ.

    ಸದ್ಯ ಇರುವ ಬೇರೆ ಬೇರೆ ಹಾಲು ಕಂಪನಿಗಳ ದರ:

    ನಂದಿನಿ 37 ರೂ.
    ದೊಡ್ಲ 44 ರೂ.
    ಜೆರ್ಸಿ 44 ರೂ.
    ಹೆರಿಟೇಜ್ 45 ರೂ.
    ತಿರುಮಲ 48 ರೂ.
    ಗೋವರ್ಧನ್ 46 ರೂ.
    ಆರೋಗ್ಯ 50 ರೂ.

    ಬೇರೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ:

    ಕರ್ನಾಟಕ 37 ರೂ.
    ಆಂಧ್ರಪ್ರದೇಶ 55 ರೂ.
    ತಮಿಳುನಾಡು 40 ರೂ.
    ಕೇರಳ 46 ರೂ.
    ಮಹಾರಾಷ್ಟ್ರ 51 ರೂ.
    ದೆಹಲಿ 51 ರೂ.
    ಗುಜರಾತ್ 50 ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts