More

  ದೀಪಿಕಾ ಫೋಟೊ ನೋಡುತ್ತಾ ಮೈಮರೆತ ರಣ​ವೀರ್…!

  ಮುಂಬೈ: ಇಂದು ಬಾಲಿವುಡ್​ನ ಹೈ ಪ್ರೊಫೈಲ್ ದಂಪತಿ ರಣ​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿವಾಹ ಜೀವನದ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಸೋಷಿಯಲ್ ಮೀಡಿಯಾ ಮುಖಾಂತರ ಹಂಚಿಕೊಂಡು ಕಪಲ್-ಗೋಲ್ ಸೆಟ್ ಮಾಡಿದ್ದಾರೆ. ಇತ್ತೀಚೆಗೆ, ರಣ​ವೀರ್ ಮರ್ಕೆಚ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು, ಅಲ್ಲಿ 19 ನೇ ಆವೃತ್ತಿಯಲ್ಲಿ ಎಟೊಯಿಲ್ ಡಿ’ಓರ್ ಗೌರವಕ್ಕೆ ಪಾತ್ರರಾಗಿದ್ದರು. ಗೌರವ ಸಿಕ್ಕ ಕೂಡಲೆ ಸಂತಸದ ಸಾಗರದಲ್ಲಿ ತೇಲಾಡಿದ್ದರು.

  ರಣ​ವೀರ್ ಇನ್ಸ್ಟಾಗ್ರಾಮ್​ನಲ್ಲಿ ಚಿತ್ರೋತ್ಸವದ ತುಣುಕುಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ತಮ್ಮ ಪತ್ನಿ ದೀಪಿಕಾ ಫೋಟೋವನ್ನು ಕಣ್ಣು ಬಾಯಿ ಬಿಟ್ಟುಕೊಂಡು ಪ್ರೀತಿಯಿಂದ ನೋಡುತ್ತಿರುವ ದೃಶ್ಯವನ್ನು ಹಾರ್ಟ್​ – ಐ ಇಮೋಜಿಯೊಂದಿಗೆ ಶೇರ್ ಮಾಡಿದ್ದರು. ಇದರ ಜತೆ ತನ್ನ ಅಚ್ಚುಮೆಚ್ಚಿನ ನಟ ಬಾಲಿವುಡ್ ಬಾದ್​​ಶಾ ಶಾರುಖ್ ಖಾನ್​ ಫೋಟೊ ನೋಡುವಲ್ಲಿ ಮಗ್ನರಾಗಿದ್ದರು. ವಿಶೇಷವೆಂದರೆ, ದೀಪಿಕಾ ಮತ್ತು ಶಾರುಖ್ ಒಟ್ಟಿಗೆ ನಟಿಸಿರುವ ಪಟ್ಟಾನ್ ಚಿತ್ರ ಮುಂದಿನ ವರ್ಷ ಜನವರಿ 25ರಂದು ತೆರೆ ಕಾಣಲಿದೆ.

  “ಸಿನಿಮಾ ಒಂದು ಅಪೂರ್ವ ಶಕ್ತಿ! ನನ್ನ ಕೆಲಸ ದೇಶ, ಸಂಸ್ಕೃತಿ ಎಲ್ಲವನ್ನೂ ಮೀರಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ನನಗೆ ಖುಷಿ ಇದೆ. ಮೊರಾಕೊ ಜನರ ಪ್ರೀತಿ, ಗೌರವಕ್ಕೆ ನಾನು ಸದಾ ಕೃತಜ್ಱನಾಗಿರುತ್ತೇನೆ. ನನಗೆ ಎಟೊಯಿಲ್ ಡಿ’ಓರ್ ಪ್ರಶಸ್ತಿ ನೀಡಿದ ಮರ್ಕೆಚ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಧನ್ಯವಾದಗಳು. ನನ್ನ ಸಂಸ್ಕೃತಿಯ ರಾಯಭಾರಿಯಾಗಿ, ಭಾರತ ಚಿತ್ರರಂಗವನ್ನು ವಿಶ್ವ ಮಟ್ಟದಲ್ಲಿ ಪ್ರತಿನಿಧಿಸಲು ನನಗೆ ಹೆಮ್ಮೆ ಇದೆ” ಎಂದು ರಣ​ವೀರ್ ಇನ್ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. – ಏಜೆನ್ಸೀಸ್

  ನಂದಿನಿ ಬ್ರ್ಯಾಂಡ್ ಹಾಲಿನ ಬೆಲೆ ಏರಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts