More

    ಚುನಾವಣೆ ವೇಳೆ ಸಿಎಂ ಅರವಿಂದ್​ ಕ್ರೇಜಿವಾಲ್ ಬಂಧನ ಯಾಕೆ? ಇಡಿಗೆ ಕೋರ್ಟ್​ ಪ್ರಶ್ನೆ!

    ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಸಮಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಜಾರಿ ನಿರ್ದೇಶನಾಲಯವನ್ನು ಕೇಳಿದೆ.

    ಇದನ್ನೂ ಓದಿ: ಬಾಲಾಕೋಟ್ ದಾಳಿ ಬಗ್ಗೆ ಮೊದಲು ಹೇಳಿದ್ದು ಪಾಕಿಸ್ತಾನಕ್ಕೆ, ರಹಸ್ಯ ಬಿಚ್ಚಿಟ್ಟ ಮೋದಿ!

    ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಮತ್ತು ಜಾರಿ ನಿರ್ದೇಶನಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಪೀಠವು ವಿಚಾರಣೆ ನಡೆಸುತ್ತಿದೆ.

    “ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದೆ, ನೀವು ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕೊನೆಯ ಪ್ರಶ್ನೆಯೆಂದರೆ ಬಂಧನದ ಸಮಯದ ಬಗ್ಗೆ ಅದು ಸಾರ್ವತ್ರಿಕ ಚುನಾವಣೆಗೆ ಮುನ್ನವೇ ಆಗಿದೆ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಕೇಳಿದ್ದಾರೆ.ವಿಚಾರಣೆಯ ಪ್ರಾರಂಭ ಮತ್ತು ಕೆಲವು ಸಮಯದ ನಂತರ ಪುನರಾವರ್ತಿತ ದೂರುಗಳ ನಡುವೆ ನಡೆಯುತ್ತಿರುವ ಸಮಯದ ಅಂತರದ ಬಗ್ಗೆ ವಿವರಿಸಲು ತನಿಖಾ ಸಂಸ್ಥೆಯನ್ನು ಸುಪ್ರೀಂ ಕೋರ್ಟ್ ಕೇಳಿದೆ.

    ಅರವಿಂದ್ ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಅಪರಾಧದ ಆದಾಯದ ಕುರುಹು ಇಲ್ಲ ಮತ್ತು ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ನೇರವಾಗಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

    ಮುಂದಿನ ವಿಚಾರಣೆ ನಡೆಯುವ ಮೇ 3 ಶುಕ್ರವಾರ ರಂದು ತಿಳಿಸುವಂತೆ ನೀಡುವಂತೆ ಇಡಿಗೆ ಸೂಚಿಸಲಾಗಿದೆ. ಈಗ ರದ್ದಾದ ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು . ಅವರು ಏಪ್ರಿಲ್ 1 ರಿಂದ ತಿಹಾರ್ ಜೈಲಿನಲ್ಲಿದ್ದು ಮೇ 7 ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.

    ಏಪ್ರಿಲ್ 9 ರಂದು ದೆಹಲಿ ಹೈಕೋರ್ಟ್ ಮುಖ್ಯಮಂತ್ರಿಯ ಬಂಧನದಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದು ತೀರ್ಪು ನೀಡಿತು.’

    ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಹರಿದು ಬಿಸಾಡಲಿದೆ: ರಾಹುಲ್ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts