ನಂದಿನಿ ಬ್ರ್ಯಾಂಡ್ ಹಾಲಿನ ಬೆಲೆ ಏರಿಕೆ

ವಿಜಯವಾಣಿ ಸುದ್ದಿ ಜಾಲ, ಬೆಂಗಳೂರು:ನಂದಿನಿ ಬ್ರಾಂಡ್ ನ ಹಾಲಿನ ಬೆಲೆ ಹೆಚ್ಚಳವಾಗಿದೆ. ನಾಳೆಯಿಂದಲೇ ಪರಿಷ್ಕೃತ ಹಾಲಿನ ದರ ಜಾರಿಗೆ ಬರಲಿದೆ. ಕೆಎಂಎಫ್ ನ ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಹೆಚ್ಚಳ ಮಾಡಲು ಕಳೆದ 6 ತಿಂಗಳಿಂದ ಸರ್ಕಸ್ ನಡೆದಿತ್ತು. ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ದರದಲ್ಲಿ ತಲಾ 3 ರೂಪಾಯಿ ಏರಿಕೆಯಾಗಿದೆ. ಟೋನ್ಡ್ ಹಾಲಿನ ದರ ರೂ 37 ರಿಂದ 40 ರೂಪಾಯಿಗೆ ಏರಿಕೆಯಾಗಿದೆ. ಸ್ಪೆಷಲ್ ಹಾಲಿನ ದರ 43ರಿಂದ 46 ರೂಪಾಯಿಗೆ ಏರಿಕೆಯಾಗಿದೆ. … Continue reading ನಂದಿನಿ ಬ್ರ್ಯಾಂಡ್ ಹಾಲಿನ ಬೆಲೆ ಏರಿಕೆ