More

    ಜಾತ್ರೆಯಂತಾದ ಒಕ್ಕಲಿಗರ ವಧು-ವರರ ಸಮಾವೇಶ: 25 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ, ವಧು ನೋಂದಣಿ ಸಂಖ್ಯೆ ಕೇವಲ 250…

    ನಾಗಮಂಗಲ: ಆದಿಚುಂಚನಗಿರಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅಕ್ಷರಶಃ ಜಾತ್ರೆಯಂತೆ ಕಂಡುಬಂತು. ವಧುಗಳಿಗಿಂತ ವರರ ಸಂಖ್ಯೆಯೇ ಹೆಚ್ಚಾಗಿತ್ತು. ವಧು-ವರರ ಸಮಾವೇಶದಲ್ಲಿ ರೈತ ಸಮೂಹದ ಹುಡುಗರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು. ವಧುಗಳ ನೋಂದಣಿ ಸಂಖ್ಯೆ ಕೇವಲ 250.

    ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ವಾರಕ್ಕೂ ಮೊದಲಿನಿಂದಲೇ ಸುಮಾರು 13 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವಧು-ವರರು ನೋಂದಣಿ ಮಾಡಿಸಿದ್ದರು. ಈ ಪೈಕಿ ವಧು ನೋಂದಣಿ ಸಂಖ್ಯೆ ಕೇವಲ 250. ತಮ್ಮ ಪಾಲಕರ ಜತೆಗೂಡಿ ವಧು-ವರರು ಆಗಮಿಸಿದ್ದರಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಬಿಜಿಎಸ್​ ಸಭಾಮಂಟಪದಲ್ಲಿ ಭಾನುವಾರ ಬೆಳಗ್ಗೆ 9.30ಕ್ಕೆ ಆರಂಭವಾದ ಸಮಾವೇಶ ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಈ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿದ್ದ ವರರು ವೇದಿಕೆ ಮೇಲೆ ನಿಂತು ತಮ್ಮ ಸ್ವವಿವರಗಳನ್ನು ತಿಳಿಸಿದರು. ಸ್ವವಿವರ ತಿಳಿಸಲು ಸಾಲಿನಲ್ಲಿ ನಿಂತು ಸಾಗುತ್ತಿದ್ದರಿಂದ ನೂಕುನುಗ್ಗಲು ಉಂಟಾಯಿತು. ಬಿಜಿಎಸ್​ ಸಭಾಂಗಣದಲ್ಲಿ ಕೆಲವು ಪಾಲಕರು ನೂಕುನುಗ್ಗಲಿನಲ್ಲಿ ಆಯತಪ್ಪಿ ಕೆಳಗೆಬಿದ್ದು ಅಸ್ವಸ್ಥರಾದರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದು ಕೂಡ ಕಂಡುಬಂತು.

    ವಧುಗಳಿಗಿಂತ ವರರ ಸಂಖ್ಯೆಯ ಹೆಚ್ಚಾಗಿದ್ದರಿಂದ ವಧುಗಳ ಪಾಲಕರು ಸಮಾವೇಶದ ವೇದಿಕೆ ಹತ್ತಲು ಕೂಡ ಹಿಂದೇಟು ಹಾಕಿದರು. ವಧು-ವರರ ಸಮಾವೇಶದಲ್ಲಿ ರೈತ ಸಮೂಹದ ಹುಡುಗರು ಹೆಚ್ಚಾಗಿದ್ದು ವಿಶೇಷವಾಗಿತ್ತು. ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಭಾನುವಾರ ಬೆಳ್ಳೂರು ಕ್ರಾಸ್​ನಿಂದ ಆದಿಚುಂಚನಗಿರಿವರೆಗೆ ಉಚಿತ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

    ಜಾತ್ರೆಯಂತಾದ ಒಕ್ಕಲಿಗರ ವಧು-ವರರ ಸಮಾವೇಶ: 25 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ, ವಧು ನೋಂದಣಿ ಸಂಖ್ಯೆ ಕೇವಲ 250...

    ಸಮಾವೇಶದಲ್ಲಿ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಸಮಾವೇಶಕ್ಕೆ ಇಷ್ಟೊಂದು ದೊಡ್ಡಮಟ್ಟದ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ನಿರೀಕ್ಷೆಯಿರಲಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಒಕ್ಕಲಿಗರ ವಧು-ವರರ ಸಮಾವೇಶವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುವುದು ಎಂದರು.

    ವಧು-ವರರ ಸಮಾವೇಶವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ಬರುವಂತಹ ಸಂದರ್ಭದಲ್ಲಿ ಹಾಗೂ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾದರೆ ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯದ ಪ್ರತಿಯೊಬ್ಬರೂ ಹೋರಾಟಕ್ಕೆ ಆಗಮಿಸಬೇಕು ಎಂದು ನಿರ್ಮಲಾನಂದನಾಥ ಶ್ರೀಗಳು ಕರೆ ನೀಡಿದರು.

    ಸಾಲುಗಟ್ಟಿ ನಿಂತ ವಾಹನಗಳು: ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನಾಗಮಂಗಲ ತಾಲೂಕಿನ ಅಂಬಲಜೀರಹಳ್ಳಿ ಗ್ರಾಮದಿಂದ ಆದಿಚುಂಚನಗಿರಿ ಮಠದವರೆಗೆ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀ.ಗಟ್ಟಲೆ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಮಾವೇಶ ಮುಗಿದ ನಂತರವೂ ಟ್ರಾಫಿಕ್​ ಜಾಮ್​ ಉಂಟಾಯಿತು.

    ರಾತ್ರೋರಾತ್ರಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ಬಂಧನ

    ಸೀಬೆ ಬೆಳೆದ ಇಂಜಿನಿಯರ್!

    ಮಂಡ್ಯದಲ್ಲಿ ರಸ್ತೆ ಗುಂಡಿಗೆ ನಿವೃತ್ತ ಯೋಧ ಬಲಿ: ಬೈಕ್​ನಿಂದ ಕೆಳಗೆ ಬಿದ್ದ ಮಗನ ಮೇಲೆ ಹರಿದ ಲಾರಿ… ತಂದೆ ಕಣ್ಣೆದುರೇ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts