ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಚಾಟ್ ಫಿಲ್ಟರ್ ಎಂಬ ಆಯ್ಕೆ, ಚಾಟ್ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆ ತರಲಿದೆ

wggg
Published on

ಸದ್ಯದಲ್ಲೇ ವಾಟ್ಸ್​ಆ್ಯಪ್​ನಲ್ಲಿ ಫಿಲ್ಟರ್ ಆಯ್ಕೆ ಬರಲಿದ್ದು, ಇದು ಚಾಟ್ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆ ತರಲಿದೆ.
ಮೊನ್ನೆಯಷ್ಟೆ ಭಾರತದಲ್ಲಿ ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿದಂತಹ 72 ಲಕ್ಷಕ್ಕೂ ಅಧಿಕ ಖಾತೆಯನ್ನು ನಿಷೇಧಿಸಿ ಸುದ್ದಿಯಾಗಿತ್ತು.

ಇದರ ನಡುವೆ ಹೊಸ ಹೊಸ ಫೀಚರ್​ಗಳನ್ನು ಕೂಡ ಘೋಷಣೆ ಮಾಡುತ್ತಿದೆ.
WabetaInfo ನ ವರದಿಯ ಪ್ರಕಾರ, ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರಿಗೆ ಚಾಟ್ ಪಟ್ಟಿಯನ್ನು ಫಿಲ್ಟರ್ ಎಂಬ ಹೊಸ ವೈಶಿಷ್ಟ್ಯವನ್ನು ನೀಡಲು ಮುಂದಾಗಿದೆ. ಸದ್ಯ ಈ ಫೀಚರ್ ಅಭಿವೃದ್ದಿ ಹಂತದಲ್ಲಿದೆ ಎಂದು ಹೇಳಿದೆ.


ಈ ಹೊಸ ಟೂಲ್ ಬಗ್ಗೆ ಸ್ಕ್ರೀನ್ ಶಾಟ್ ಕೂಡ ಹರಿದಾಡುತ್ತಿದೆ. ಈ ಆಯ್ಕೆಯ ಮೂಲಕ ಚಾಟ್ ಲಿಸ್ಟ್​ ಅನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ವಾಟ್ಸ್​ಆ್ಯಪ್ ಬೀಟಾ 2.23.14.17 ಅಪ್ಡೇಟ್​ನಲ್ಲಿ ಇದು ಕಂಡುಬಂದಿದೆ.


ಳಕೆದಾರರು ಸೆಕೆಂಡುಗಳಲ್ಲಿ ಪ್ರಮುಖ ಚಾಟ್‌ಗಳನ್ನು ಪ್ರವೇಶಿಸಬಹುದು. ಆದರೆ, ಗ್ರೂಪ್ ಚಾಟ್​ಗಳಿಗೆ ಇದು ಅನ್ವಯ ಆಗುವುದಿಲ್ಲ. ಇದಕ್ಕಾಗಿ ಯಾವುದೇ ಆಯ್ಕೆ ಕಂಡುಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net