ವಾಟ್ಸ್​ಆ್ಯಪ್​ ಖಾಸಗಿತನದ ನೀತಿ ಅಪ್​ಡೇಟ್​

watsapp new
Published on

ನವದೆಹಲಿ: ಸೇವಾ ಷರತ್ತುಗಳು ಮತ್ತು ಖಾಸಗಿತನದ ನೀತಿಗಳನ್ನು ವಾಟ್ಸ್​ಆ್ಯಪ್​ ಅಪಡೇಟ್​ ಮಾಡಿದೆ.

ಇವು ಬಳಕೆದಾರ ದತ್ತಾಂಶದ ಸಂಸ್ಕರಣೆ ಹಾಗೂ ಫೇಸ್​ಬುಕ್​ನೊಂದಿಗೆ ಹೇಗೆ ಪಾಲುದಾರಿಕೆ ಹೊಂದಿರುತ್ತದೆ ಎನ್ನುವುದಕ್ಕೆ ಸಂಬಂಧಿಸಿದ ನಿಯಮ ಹಾಗೂ ನೀತಿಗಳಿಗೆ ಸಂಬಂಧಿಸಿದ ಅಪ್​ಡೇಟ್​ಗಳಾಗಿವೆ.

ಫೆಬ್ರವರಿ 8ರಿಂದ ಇವುಗಳು ಅನ್ವಯವಾಗಲಿದ್ದು, ಈ ಬಗ್ಗೆ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂದೇಶಗಳು ಬರುತ್ತಿವೆ. ವಾಟ್ಸ್​ಆ್ಯಪ್​ ಚಾಟ್​ಗಳ ಸಂಗ್ರಹ ಹಾಗೂ ನಿರ್ವಹಿಸಲು ಫೇಸ್​ಬುಕ್​ನ ಸೇವೆಗಳನ್ನು ವ್ಯಾಪಾರೋದ್ಯಮಿಗಳು ಹೇಗೆ ಬಳಸಬಹುದು, ಕಂಪನಿಯ ಉತ್ಪನ್ನಗಳನ್ನು ಸಮನ್ವಯಗೊಳಿಸಲು ಫೇಸ್​ಬುಕ್​ನೊಂದಿಗೆ ತಾನು ಹೇಗೆ ಭಾಗಿಯಾಗಿದ್ದೇನೆ ಎನ್ನುವ ಬಗ್ಗೆಯೂ ಅಪ್​ಡೇಟ್​ಗಳಿವೆ.

ವಾಟ್ಸ್​ಆ್ಯಪ್​ ಬಳಕೆಯನ್ನು ಮುಂದುವರಿಸಬೇಕಾದರೆ ಈ ಅಪ್​ಡೇಟ್​ಗಳನ್ನು ಅಂಗೀಕರಿಸಬೇಕೆಂದು ಬಳಕೆದಾರರಿಗೆ ಅದು ಸೂಚಿಸಿದೆ. 2016ರಲ್ಲಿ ಕೊನೇ ಬಾರಿ ವಾಟ್ಸ್​ಆ್ಯಪ್​ ಜಾಗತಿಕವಾಗಿ ಖಾಸಗಿತನದ ನೀತಿಯನ್ನು ಅಪ್​ಡೇಟ್​ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net