

ದೆಹಲಿ: ವಿಶ್ವದಾದ್ಯಂತ ಮಿಲಿಯನ್ಗಟ್ಟಲೇ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ತನ್ನ ಗ್ರಾಹಕರಿಗಾಗಿ ಮತ್ತೊಂದು ಅದ್ಭುತ ಫೀಚರ್ನ್ನು ಹೊರತರುತ್ತಿದೆ.
ಮೆಟಾ-ಮಾಲೀಕತ್ವದ ವಾಟ್ಸ್ಆ್ಯಪ್ ಸ್ಕ್ರೀನ್ ಶೇರಿಂಗ್ ಎಂಬ ಹೊಸ ಫೀಚರ್ನ್ನು ಒದಗಿಸಲು ಮುಂದಾಗಿದ್ದು, ಇದು ವೀಡಿಯೊ ಕರೆಗಳ ಸಮಯದಲ್ಲಿ ನಿಮ್ಮ ಪರದೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ಸಹಾಯಕವಾಗಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳಲ್ಲಿ ಪೋಸ್ಟ್‌ಗಳ ಮೂಲಕ ಈ ವೈಶಿಷ್ಟ್ಯವನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: VIDEO| ಶಾಲಾ ಬಾಲಕಿಯ ಮೇಲೆ ಭಯಾನಕವಾಗಿ ಪದೇ ಪದೇ ದಾಳಿ ಮಾಡಿದ ಹಸುಗಳು
ಜೂಮ್, ಮೈಕ್ರೋಸಾಫ್ಟ್, ಗೂಗಲ್ ಮೀಟ್ ಮತ್ತು ಸ್ಕೈಪ್‌ನಂತಹ ಸಾಂಪ್ರದಾಯಿಕ ವೀಡಿಯೊ-ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸ್ಪರ್ಧಿಸಲು ವ್ಯಾಟ್ಸ್ಆ್ಯಪ್ ಹೊಸ ಫೀಚರ್ನ್ನು ನೀಡುವ ಮೂಲಕ ಮೆಟಾ ಬಳಕೆದಾರರಿಗೆ ಬೇರೆ ಫ್ಲಾಟ್ಫಾರ್ಮ್ನ ಮೇಲೆ ಅವಲಂಬನೆಯಾಗದಂತೆ ಮಹತ್ವದ ಹೆಜ್ಜೆಯನ್ನಿರಿಸಿದೆ. ಈ ವೈಶಿಷ್ಟ್ಯವು ಕೆಲವು ವಾರಗಳವರೆಗೆ ಆ್ಯಂಡ್ರಾಯ್ಡ್ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದ್ದು, ಇದು ಕ್ರಮೇಣ ಪ್ರಪಂಚದಾದ್ಯಂತದ ಎಲ್ಲಾ ಬಳಕೆದಾರರಿಗೆ ಸಿಗಲಿದೆ.
ಸ್ಮಾರ್ಟ್‌ಫೋನ್‌ಗಳಲ್ಲಿ ಪಠ್ಯಗಳು ಮತ್ತು ಗ್ರಾಫಿಕ್ಸ್ ಅನ್ನು ಹೆಚ್ಚು ಸ್ಪಷ್ಟವಾಗಿ ಕಾಣುವಂತೆ ಮಾಡುವ ಮೂಲಕ ಇದು ಸ್ಕ್ರೀನ್ ಶೇರಿಂಗ್ನ್ನು ಸುಲಭಗೊಳಿಸುವುದರ ಜತೆಗೆ ವೀಡಿಯೊ ಕರೆಗಳಲ್ಲಿ ಲ್ಯಾಂಡ್‌ಸ್ಕೇಪ್ ಮೋಡ್ನ್ನು ಸಹ ಪರಿಚಯಿಸಿದೆ.ಅಲ್ಲದೇ, ಕೆಲದಿನಗಳ ಹಿಂದೆ ವಾಟ್ಸ್ಆ್ಯಪ್ ವೇದಿಕೆಯಲ್ಲಿ ಬಳಕೆದಾರರು 60 ಸೆಕೆಂಡುಗಳವರೆಗೆ ವೀಡಿಯೊ ಸಂದೇಶಗಳನ್ನು ಕಳುಹಿಸಬಹುದಾದ ಕಿರು ವೀಡಿಯೊ ಸಂದೇಶದ ವಿಶಿಷ್ಟ ಫೀಚರ್ನ್ನು ಒದಗಿಸಿದೆ.(ಏಜೆನ್ಸೀಸ್)