

ಚೆನ್ನೈ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಒಂಬತ್ತು ವರ್ಷದ ಶಾಲಾ ಬಾಲಕಿಯ ಮೇಲೆ ಎರಡು ಹಸುಗಳು ಅಮಾನುಷವಾಗಿ ದಾಳಿ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಇದನ್ನೂ ಓದಿ: ಯುವತಿ ಮದುವೆಯಾಗಲು ಫಿಜಿ ದೇಶದಿಂದ ಬಂದು ಪೊಲೀಸರ ಅತಿಥಿಯಾದ ಮೂರು ಮಕ್ಕಳ ತಂದೆ..!
ಮದ್ರಾಸ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿ ಕಾಲೋನಿ ಪ್ರದೇಶದ ಇಳಂಗೋ ಸ್ಟ್ರೀಟ್‌ನಲ್ಲಿ ಬಾಲಕಿಯು ತನ್ನ ತಾಯಿ ಮತ್ತು ಕಿರಿಯ ಸಹೋದರನೊಂದಿಗೆ ಎರಡು ಹಸುಗಳ ಹಿಂದೆ ನಡೆದುಕೊಂಡು ಹೋಗುತ್ತಿದ್ದಾಗ ಒಂದು ಹಸು ಹಿಂಸಾತ್ಮಕವಾಗಿ ತಿರುಗಿ ಕೊಂಬುಗಳಿಂದ ಪದೇ ಪದೇ ದಾಳಿ ಮಾಡಿದೆ. ತಾಯಿಯ ಕಿರುಚಾಟ ಕೇಳಿ ಸ್ಥಳೀಯರು ಹಾಗೂ ದಾರಿಹೋಕರು ಜಮಾಯಿಸಿ ಕಲ್ಲು ಎಸೆದು ಶಬ್ಧ ಮಾಡಿ ಹಸುವನ್ನು ಓಡಿಸಲು ಯತ್ನಿಸಿದರು. ಕೊನೆಗೆ ಕೋಲಿನಿಂದ ವ್ಯಕ್ತಿಯೊಬ್ಬ ಹೊಡೆದ ನಂತರ, ಹಸು ಅಂತಿಮವಾಗಿ ಸ್ಥಳದಿಂದ ಹೊರಟುಹೋಗಿದೆ.
ಹಸುವಿನ ದಾಳಿಯಿಂದಾಗಿ ಬಾಲಕಿಯ ತಲೆಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಚೆನ್ನೈ ಪಾಲಿಕೆ ಅಧಿಕಾರಿಗಳು ಹಸುಗಳನ್ನು ಹಿಡಿದಿದ್ದು, ಇವುಗಳ ಮಾಲೀಕರಿಗೆ ದಂಡ ವಿಧಿಸಲಾಗುವುದು. ನಗರ ವ್ಯಾಪ್ತಿಯಲ್ಲಿ ಜಾನುವಾರು ಸಾಕಣೆಯ ಇತರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)